ಸಸ್ಯಲಂಪಟಬಲೀವರ್ದೋ ನಶಕ್ಯೋ ವಾರೈತುಮ್ –ಅನ್ಯಪ್ರಸಕ್ತಕಲತ್ರಂ ನ ಶಕ್ಯಂ ವಾರಯಿತುಮ್ |ದ್ಯೂತಪ್ರಸಕ್ತಮನುಷ್ಯೋ ನ ಶಕ್ಯೋ ವಾರಯಿತುಮ್ |ಯೋಽಪಿ ಸ್ವಾಭಾವಿಕದೋಷೋ ನ ಶಕ್ಯೋ ವಾರಯಿತುಮ್ |
ಇದು ಮೃಚ್ಛಕಟಿಕಮ್ ನಾಟಕದ ಒಂದು ಮಾತು. ಚಾರುದತ್ತ ಮತ್ತು ಸೇವಕನೋರ್ವನ ನಡುವೆ ನಡೆದ ಮಾತುಕತೆಯಲ್ಲಿ ಬರುವ ಒಂದು ನೀತಿ. ಹುಲ್ಲಿಗಾಸೆ ಪಡುವ ಗೂಳಿಯನ್ನು ತಡೆಯಲು ಅಸಾಧ್ಯ. ಪರಪುರುಷನ ಬಯಕೆಯಿರುವ ಹೆಂಗಸನ್ನು ಸರಿಪಡಿಸುವುದು ಅಸಾಧ್ಯ. ಅದೇ ರೀತಿ ಜೂಜಿಗೆ ಮನಸೋತವನನ್ನು ಸರಿಪಡಿಸುವುದು ಸಹ ಅಸಾಧ್ಯ ಎಂದು ಈ ಮಾತಿನ ಅರ್ಥ.
ಮೊದಲನೆಯದ್ದು ವ್ಯಸನ ಎನ್ನಲಾಗದು. ಹುಲ್ಲು ಗೂಳಿಗೆ ಸಹಜವಾದ ಆಹಾರ. ಹಸಿಯ ಹುಲ್ಲು ಇದ್ದರೆ ಅದಕ್ಕೆ ಹೆಚ್ಚಿನ ಪ್ರೀತಿ. ಅದರತ್ತ ಧಾವಿಸಿ ಬರುವುದು ಗೂಳಿಗೆ ಸಹಜ. ಹುಲ್ಲಿನ ಒಡೆತನ ನಮ್ಮದೇ ಆಗಿದ್ದರೂ ಗೂಳಿಯ ಶಕ್ತಿ ಮತ್ತು ವೇಗದ ಮುಂದೆ ನಾವೇನೂ ಮಾಡಲಾಗದು. ಒಂದು ವೇಳೆ ಅದು ಹುಲ್ಲನ್ನು ತಿಂದು ಒಂದಿಷ್ಟು ಗದ್ದೆಯನ್ನು ನಾಶ ಪಡಿಸಿ ಹೋದರೂ ಕೂಡ ಅವುಗಳನ್ನು ಮತ್ತೆ ಪಡೆಯಬಹುದು. ಹುಲ್ಲು ವ್ಯರ್ಥವಾಗಿಲ್ಲ, ಗೂಳಿಯ ಹೊಟ್ಟೆ ತಣಿಯಿತು ಎಂಬ ಸಮಾಧಾನವಾದರೂ ಇರುವುದು. ಆದರೆ ಉಳಿದ ಎರಡು ವ್ಯಸನಗಳ ಬಗ್ಗೆ ಮಾತನಾಡದಿರುವುದೇ ಲೇಸು.
ಕಲಿಯ ವೇಗ ಎಲ್ಲೆಡೆ ಬಿಡುಬೀಸಾಗಿ ಹರಡಿದೆ. ಇದರ ಬಗ್ಗೆ ಮಾತನಾಡಿದರೆ ಈಗ ಬುದ್ಧಿಜೀವಿಗಳ ಕ್ರೋಧಕ್ಕೆ ಬಲಿಯಾಗಬೇಕಾದೀತು. ಮೂರನೆಯ ವ್ಯಸನವಂತೂ ಆಟ ಎಂದೇ ದೇಶದ ಪರಮೋಚ್ಚ ಸಂಸ್ಥೆಗಳ ಅಭಿಪ್ರಾಯಗವಾಗಿದೆ. ಎರಡನೆಯದ್ದೂ ತಪ್ಪಲ್ಲ ಎನ್ನುವ ಎಲ್ಲ ಲಕ್ಷಣಗಳೂ ಈಗೀಗ ಮೊಳಕೆಯೊಡೆಯುತ್ತಿವೆ.
ಅಲ್ಲಿಗೆ ಮುಗಿಯಿತು.
ವ್ಯಸನಿಯ ಚಿತ್ರ ಕೃಪೆ : http://shutterstock.com
Be First to Comment