Difference between a wise & a foolish

ಮೂರ್ಖೋ ಹಿ ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ |
ಅಶುಭಂ ವಾಕ್ಯಮಾದತ್ತೇ ಪುರೀಷಮಿವ ಸೂಕರಃ ||
ಪ್ರಾಜ್ಞಾಸ್ತು ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ
ಗುಣವದ್ವಾಕ್ಯಮಾದತ್ತೇ ಹಂಸಾಃ ಕ್ಷೀರಮಿವಾಂಭಸಃ ||

ಬಂಧುವರ್ಗದವರು ಒಂದೆಡೆ ಸೇರಿದಾಗ ಸಾಮಾನ್ಯವಾಗಿ ಒಳ್ಳೆಯ ಹಾಗು ಕೆಟ್ಟದ್ದು ಎರಡನ್ನೂ ಕುರಿತು ಚರ್ಚಿಸುತ್ತಿರುತ್ತಾರೆ. ಆದರೆ ಮಧುರವಾದ ಭಕ್ಷ್ಯಗಳಿದ್ದರೂ ಅವುಗಳನ್ನು ತ್ಯಜಿಸಿ ಅಮೇಧ್ಯವನ್ನು ಹುಡುಕಿಕೊಂಡು ಹೋಗುವ ಹಂದಿಯಂತೆ ಆ ಗುಂಪಿನಲ್ಲಿರಬಹುದಾದ ಮೂರ್ಖನು ಒಳ್ಳೆಯ ಮಾತುಗಳನ್ನು ಪರಿಗಣಿಸದೆ ಕೇವಲ ಅಶುಭವನ್ನು ಮಾತ್ರ ಗ್ರಹಿಸಿ ಏನೂ ಕಾರಣವಿಲ್ಲದೆ ಜನರನ್ನು ಅವಹೇಳನ ಮಾಡುತ್ತಾನೆ. ಅದೇ ಗುಂಪಿನಲ್ಲಿರುವ ಪ್ರಾಜ್ಞನು ನೀರನ್ನು ಬೇರ್ಪಡಿಸಿ  ಹಾಲನ್ನು ಮಾತ್ರ ಸ್ವೀಕರಿಸುವ ಹಂಸದಂತೆ ಗುಣಭರಿತವಾದ ಮಾತುಗಳನ್ನು ಮಾತ್ರವೇ ಗ್ರಹಿಸುತ್ತಾನೆ.

मूर्खो हि जल्पतां पुंसां श्रुत्वा वाचः शुभाशुभाः ।
अशुभं वाक्यमादत्ते पुरीषमिव सूकरः ॥
प्राज्ञास्तु जल्पतां पुंसां श्रुत्वा वाचः शुभाशुभाः
गुणवद्वाक्यमादत्ते हंसाः क्षीरमिवांभसः ॥

बन्धुजन जब एक जगः में एकत्र होते हैः तो वहां शुभ व अशुभ विषयों पर चर्चा होते हुए देखना सामान्य है । पर उन लोगों मे से केवल एक मूर्ख हि अच्छे बातों को तालकर केवल बुरे बातों को स्वीकार करके बेवजः दूसरों का निन्दा करता है । जैसे एक सुव्वर अपने सामने रखे हुए मिठान को त्याग करके अमेध्य को ढूंढके खाने मे संतुष्ट बनता है  | उस वर्ग में ही बैठा हुअ एक प्राज्ञ व्यक्ति वही बातचीतों से केवल स्वच्चविचारों का ही ग्रहण करता है जैसे एक हंस पक्षी पानी से दूध को अलग करके स्वीकार करता है ॥

mUrkhO hi jalpatAM puMsAM shrutvA vAcaH shuBAshuBAH |
ashubhaM vAkyamAdatte purIShamiva sUkaraH ||
prajnastu jalpatam pumsam srutva vacah subhasubhah
gunavad vakyam adatte hamsah ksiram ivambhasah||

A foolish is like a dirty swine that goes elsewhere in search of dirt despite having feast. It is common to discuss about both good and bad things whenever relatives and friends are assembled at a place.  But only the foolish among those people will ignore good words, grasp only negative points and disrespect others for no reasons. A wise man having heard the discussion chooses only the worthy just as a swan takes only milk from water by separating them.

–    Mahabharata

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

Timbers & Family

यथा काष्ठं च काष्ठं च समेतायां महार्णवे ।
समेत्य च व्यपेयातां कालमासाद्य कंचन ॥
एवं भार्याश्च पुत्राश्च ज्ञातयश्च धनानि च ।
समेत्य व्यवधावंति ध्रुवो ह्येषां विनाभवः ॥

ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇತಾಯಾಂ ಮಹಾರ್ಣವೇ |
ಸಮೇತ್ಯ ಚ ವ್ಯಪೇಯಾತಾಂ ಕಾಲಮಾಸಾದ್ಯ ಕಂಚನ ||
ಏವಂ ಭಾರ್ಯಾಶ್ಚ ಪುತ್ರಾಶ್ಚ ಜ್ಞಾತಯಶ್ಚ ಧನಾನಿ ಚ |
ಸಮೇತ್ಯ ವ್ಯವಧಾವಂತಿ ಧ್ರುವೋ ಹ್ಯೇಷಾಂ ವಿನಾಭವಃ ||

ಮಹಾಸಮುದ್ರದಲ್ಲಿ ಅಲೆಗಳ ಹೊಡೆತಗಳಿಂದ ಹಲವಾರು ಮರದ ದಿಮ್ಮಿಗಳು ಒಟ್ಟಾಗಿ ಸೇರುತ್ತವೆ. ಸ್ವಲ್ಪ ಕಾಲದವರೆಗೆ ಒಟ್ಟಾಗಿಯೂ ಇರುತ್ತವೆ. ಅನಂತರ ಅವೇ ಅಲೆಗಳ ಹೊಡೆತದಿಂದ ಬೇರ್ಪಟ್ಟು ಹೋಗುತ್ತವೆ. ಹೀಗೆಯೇ ಕಾಲಕರ್ಮಸಂಯೋಗದಿಂದ ಭಾರ್ಯೆ, ಪುತ್ರ, ಜ್ಞಾತಿಗಳು ಮತ್ತು ಐಶ್ವರ್ಯ ಇವೆಲ್ಲವುಗಳದರ ಮಿಲನ ಒಂದೆಡೆಗೆ ಆಗುತ್ತ್ತದೆ. ಆದರೆ ಅದೇ ಕಾಲಕರ್ಮಸಂಯೋಗದಿಂದ ಇದೆಲ್ಲವೂ ಅಗಲುವುದೂ ನಿಶ್ಚಿತ.

Timbers gather at a place in a great ocean by the hits of waves. They remain at that place for few days too. Eventually they get scattered because of the same tidal hits. Similarly gathering of wife, offspring, relatives and wealth happens at a certain place because of Kala and Karma. But it is certain that because of the combination of same Kala and Karma it all get dispelled.

Lord Rama told this to His brother Bharata.

– Ramayana Ayodhya Kanda 105: 26, 27

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಗಂಗೆಯ ಮಡಿಲಲ್ಲಿದ್ದೂ ಬಾವಿಯ ತೋಡುವರೇ?

ಈ ಲೇಖನ ಕೆಲಮಂದಿಗೆ ಹಿಡಿಸದೇ ಹೋಗಬಹುದು. ಅದು ಯಾರಿಗೆ ಮತ್ತು ಯಾಕೆ ಅಂತ ನಾನು ಹೇಳುವುದಿಲ್ಲ. ಆದರೆ ಇದು ನಿಜ.

ನಾವು ಹರಿಸರ್ವೋತ್ತಮನೆನ್ನುವವರು. ಅಂದ ಮಾತ್ರಕ್ಕೆ ಇನ್ನಿತರ ದೇವತೆಗಳನ್ನು ನಮಿಸದವರು ಎಂದಲ್ಲ. ಅವರೆಲ್ಲ ನಮಗಿಂತ ಉತ್ತಮರು, ಶ್ರೀಹರಿಯು ಈ ಎಲ್ಲರಿಗಿಂತಲೂ ಉತ್ತಮನು ಎಂದು ಅರ್ಥ. ಅಷ್ಟೇ. ಎಲ್ಲ ದೇವತೆಗಳನ್ನೂ ಅವರವರ ಸ್ಥಾನಕ್ಕೆ ತಕ್ಕಂತೆ ನಾವು ಗೌರವಿಸುತ್ತೇವೆ. ಗೌರವಿಸಲೇಬೇಕು ಎನ್ನುವುದು ಕಡ್ಡಾಯ. ಆದರೆ ನಮಸ್ಕಾರವೇನಿದ್ದರೂ ಆ ದೇವತೆಯ ಒಳಗಿರುವ ಪ್ರಾಣನ ಒಡೆಯನಾದ ಮಹಾವಿಷ್ಣುವಿಗೇ ಸಲ್ಲುವುದು. ವಿಭಿನ್ನ ಸಂದರ್ಭದಲ್ಲಿ ವಿಭಿನ್ನ ದೇವತೆಗಳ ಅಂತರ್ಯಾಮಿಯಾಗಿ ದೇವದೇವನನ್ನು ಚಿಂತಿಸುವುದೇ ಆಯಾ ದೇವತೆಗಳಿಗೆ ಸಲ್ಲಿಸುವ ಗೌರವವಾಗಿದೆ. ಈ ಸರಿದಾರಿಯನ್ನು ನಮಗೆ ತೋರಿಕೊಟ್ಟವರು ಮಧ್ವಮುನಿಗಳು. ಈ ವಿಭಿನ್ನ ದೇವತೆಗಳ ಸ್ಥಾನ ಯಾವುದು, ಅವರ ಮಂತ್ರ ಯಾವುದು? ವಿಷ್ಣುವು ಯಾವ ರೂಪದಿಂದ ಈ ದೇವತೆಗಳ ಅಂತರ್ಯಾಮಿಯಾಗಿರುತ್ತಾನೆ ಎನ್ನುವುದನ್ನು ಸಹ ಜೀವೋತ್ತಮರಾದ ಶ್ರೀಮಧ್ವಾಚಾರ್ಯರೇ ನಮಗೆ ತಿಳಿಸಿಕೊಟ್ಟಿದ್ದಾರೆ. ನಮ್ಮೀ ಗುರುಗಳು ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯವೇನೆಂದರೆ ಹರಿಯೇ ಸರ್ವೋತ್ತಮ, ಇವನೇ ನಮಗೆಲ್ಲ ಆನಂದದ ಮೂಲ. ಇವನೇ ಮೋಕ್ಷದಾತೃ ಎಂಬುದು. ಅವರ ಎಲ್ಲ ಗ್ರಂಥಗಳೂ ಈ ತತ್ತ್ವವನ್ನೇ ಸಾಧಿಸುತ್ತವೆ. ಮೋಕ್ಷಕ್ಕಾಗಿ ಇವನನ್ನು ಬಿಟ್ಟು ಬೇರೆಯ ದೇವತೆಗಳ ದುಂಬಾಲು ಬೀಳುವಂತಿಲ್ಲ. ಬಿದ್ದರೂ ಅವರು ಅದನ್ನು ಕೊಡಲಾರರು. (ಹರಿಯ ಆಜ್ಞೆಯ ಮೇರೆಗೆ ವಾಯುದೇವನು ಮೋಕ್ಷವನ್ನು ಕೊಡಬಲ್ಲ, ಆದರೆ ಇಲ್ಲಿಯವರೆಗೂ ಅವನು ಆ ಕೆಲಸವನ್ನು ಮಾಡಿಲ್ಲ. ಅದು ಬೇರೆಯದೇ ಚರ್ಚೆ)

ಒಮ್ಮೆ ಭಕ್ತರ ಅಪೇಕ್ಷೆಯ ಮೇರೆಗೆ ಶ್ರೀಭಗವತ್ಪಾದಾಚಾರ್ಯರು ಶ್ರೀಕೃಷ್ಣಾಮೃತಮಹಾರ್ಣವ ಎನ್ನುವ ಗ್ರಂಥವನ್ನು ರಚಿಸಿದರು. ಕೃಷ್ಣನ ಕಥೆಯ ಸಮುದ್ರ ಅದು. ಇಷ್ಟಾರ್ಥ ಪೂರೈಕೆಗಾಗಿ ಅನ್ಯದೈವಗಳನ್ನು ಪೂಜಿಸುವವರ ಪರಿಪಾಟಲನ್ನು ಈ ಗ್ರಂಥದಲ್ಲಿ ಆಚಾರ್ಯರು ಹೃದಯಕ್ಕೆ ತಾಕುವಂತೆ ವಿವರಿಸಿದ್ದಾರೆ.

ವಾಸುದೇವಂ ಪರಿತ್ಯಜ್ಯ ಯೋಽನ್ಯಂ ದೇವಮುಪಾಸತೇ |
ತ್ಯಕ್ತ್ವಾಽಮೃತಂ ಸ ಮೂಢಾತ್ಮಾ ಭುಂಕ್ತೇ ಹಾಲಾಹಲಂ ವಿಷಮ್ || ೧೪೪ ||

ವಾಸುದೇವನನ್ನು ಬಿಟ್ಟು ಇತರ ದೇವತೆಗಳ ಉಪಾಸನೆ ಮಾಡುವವರು ಮೂಢರು. ಹೀಗೆ ಮಾಡುವವರು ಅಮೃತವನ್ನು ತ್ಯಜಿಸಿ ಹಾಲಾಹಲ ಎನ್ನುವ ವಿಷವನ್ನು ಉಂಡಂತೆಯೇ ಸರಿ.

ತ್ಯಕ್ತ್ವಾಽಮೃತಂ ಯಥಾ ಕಶ್ಚಿದನ್ಯಪಾನಂ ಪಿಬೇನ್ನರಃ |
ತಥಾ ಹರಿಂ ಪರಿತ್ಯಜ್ಯ ಚಾಽನ್ಯಂ ದೇವಮುಪಾಸತೇ || ೧೪೫ ||

ಅಮೃತವನ್ನು ಬಿಟ್ಟು ಇನ್ನಿತರ ಕ್ಷುದ್ರಜಲ (ಅಮೃತಕ್ಕೆ ಹೋಲಿಸಿದಾಗ ಬಾವಿ, ಕೊಳಗಳ ನೀರು ಕ್ಷುದ್ರವೆನಿಸುತ್ತವೆ. ಇವುಗಳಿಂದ ಉಂಟಾಗುವ ದಾಹಶಮನವು ತಾತ್ಕಾಲಿಕ.)ವನ್ನು ಕುಡಿಯುವುವವನು ಮೂರ್ಖನು. ಇವನಂತೆಯೇ ಅನ್ಯದೈವೋಪಾಸಕನೂ ಸಹ!

ಗಾಂ ಚ ತ್ಯಕ್ತ್ವಾ ವಿಮೂಢಾತ್ಮಾ ಗರ್ದಭೀಂ ವಂದತೇ ಯಥಾ |
ತಥಾ ಹರಿಂ ಪರಿತ್ಯಜ್ಯ ಯೋಽನ್ಯದೈವಮುಪಾಸತೇ || ೧೪೭ ||

ಇತರ ದೇವರನ್ನು ಆರಾಧಿಸುವವವರ ಪರಿಯು ವಂದನೀಯವಾದ ಹಸುವನ್ನು ಬಿಟ್ಟು ಕತ್ತೆಯನ್ನು ನಮಿಸಿದಂತೆ ಇರುವುದು.

ವಾಸುದೇವಂ ಪರಿತ್ಯಜ್ಯ ಯೋಽನ್ಯಂ ದೇವಮುಪಾಸತೇ |
ತೃಷಿತೋ ಜಾಹ್ನವೀತೀರೇ ಕೂಪಂ ಖನತಿ ದುರ್ಮತಿಃ || ೧೪೮ ||

ಅವಿವೇಕಿಗಳು ಬಾಯಾರಿದಾಗ ತಾವು ಗಂಗೆಯ ಮಡಿಲಲ್ಲೇ ಇದ್ದರೂ ನೀರಿಗಾಗಿ ಬಾವಿಯನ್ನು ತೋಡುತ್ತಾರೆ. ಹೀಗೆ ತನ್ನಲ್ಲಿಯೇ ಇರುವ ವಾಸುದೇವನನ್ನು ಬಿಟ್ಟು ಇತರ ದೇವತೆಗಳನ್ನು ಪೂಜಿಸುವವನು ಮೂರ್ಖನು.

ಇನ್ನೂ ಮುಂದುವರೆದು ಆಚಾರ್ಯರು ಹೇಳುವ ಮಾರ್ಮಿಕವಾದ ಮಾತು ಇದು.

ಸ್ವಮಾತರಂ ಪರಿತ್ಯಜ್ಯ ಶ್ವಪಾಕೀಂ ವಂದತೇ ಯಥಾ |
ತಥಾ ಹರಿಂ ಪರಿತ್ಯಜ್ಯ ಯೋಽನ್ಯಂ ದೇವಮುಪಾಸತೇ ||

ಇತರ ದೇವತೆಗಳ ಆರಾಧನೆ ಎಂದರೆ, ತನ್ನ ತಾಯಿಯನ್ನು ಬಿಟ್ಟು ಪತಿತಳನ್ನು ನಮಸ್ಕರಿಸಿದಂತೆ!

ಇಷ್ಟರ ಮಟ್ಟಿಗೆ ಒತ್ತುಕೊಟ್ಟು (emphasize) ಆಡುವ ಹರಿಯಪೂಜೆಯ ಪ್ರಾಶಸ್ತ್ಯ ಮತ್ತು ಅನ್ಯದೈವಾರಾಧನೆಯ ನಿರಾಕರಣೆಯ ಮಾತುಗಳನ್ನು ನೋಡಿ ದ್ವೈತೇತರರು (Non-Dwaitis) ನಮ್ಮನ್ನು “ಬೇರೆ ದೇವರುಗಳನ್ನು ದ್ವೇಷಿಸುವ ಜನಾಂಗ” ಎಂದು ತಪ್ಪು ತಿಳಿಯುತ್ತಾರೆ. ಆದರೆ ವಾಸ್ತವವೆಂದರೆ ಯಾವ ತರಹದ ದುರಾಗ್ರಹಗಳನ್ನೂ ಇಟ್ಟುಕೊಳ್ಳದೆ ಎಲ್ಲ ದೇವರುಗಳನ್ನು ಗೌರವಿಸುವ ಜನಾಂಗ ನಮ್ಮದು.

ಈ ಮಾತುಗಳನ್ನು ಪೂರ್ವಗ್ರಹಿಕೆ ಇಲ್ಲದೆ ಹೃದಯಪೂರ್ವಕವಾಗಿ ಕೇಳಿಸಿಕೊಂಡಾಗ ಮಾತ್ರವೇ ಆಚಾರ್ಯರ ಆಂತರ್ಯವು ತಿಳಿಯುವುದು. ಇಲ್ಲಿ ಹರಿಯ ಆರಾಧನೆ ಎಂದರೆ ಯಾವುದಾದರೂ ಒಂದು ಮಾಧ್ಯಮದಲ್ಲಿ ಅಡಗಿರುವ ಅವನ ರೂಪಕ್ಕೆ ಪೂಜೆ ಎಂದು ಅರ್ಥ, ಅಷ್ಟೆ. ಮಾಧ್ಯಮವೇ ಸರ್ವೋತ್ತಮ ಎಂಬ ಅಭಿಪ್ರಾಯದ ಪೂಜೆ ಸರ್ವಥಾ ಕೂಡದು. ಉದಾಹರಣೆ : ಗಣಪತಿಯ ಪೂಜೆಯಲ್ಲಿ ವಾಸ್ತವವಾಗಿ ಗಣಪತಿಯು ಮಾಧ್ಯಮ ಮಾತ್ರ. ಅಲ್ಲಿ ನಿಜವಾದ ನಮನ ಸಲ್ಲುವುದು ಅವನ ಅಂತರ್ಯಾಮಿಯಾದ ಮುಖ್ಯಪ್ರಾಣಸ್ಥ ಶ್ರೀವಿಶ್ವಂಭರರೂಪಿಯಾದ ಶ್ರೀಹರಿಗೆ. ಹಾಗೆ ಚಿಂತಿಸದೆ, ವಿಶ್ವಂಭರನನ್ನು ಬಿಟ್ಟು ಗಣಪತಿಯೇ ಸರ್ವೋತ್ತಮನೆಂದು ಪೂಜಿಸಿದಲ್ಲಿ ಮೇಲೆ ಹೇಳಿದ ಅನರ್ಥಗಳು ಆಗುತ್ತವೆ. ಇದು ಇನ್ನಿತರ ದೇವತೆಗಳ ವಿಷಯದಲ್ಲಿಯೂ ಸಲ್ಲುವ ವಿಚಾರವಾಗಿದೆ.

ಇನ್ನಿತರರು ಏನೇ ಗೊಣಗಾಡಲಿ, ಬಾಯಿಗೆ ಬಂದ ಏನನ್ನಾದರೂ ಮಾತನಾಡಲಿ ನಾವಂತೂ ಹೀಗೆಯೇ ಪೂಜೆಯನ್ನು ಸಲ್ಲಿಸುವವರು.

“ನಾವು ಮಾಧ್ವಾಸ್!” “ನಾನೂ ಮಧ್ವಮತದ ಪದ್ಧತಿಯನ್ನು ನಾನು ಫಾಲೋ ಮಾಡ್ತೀನಿ” I wanna learn Madhwa tradition pooja ಎನ್ನುತ್ತ ಏನೇನೋ ಮಾಡುವವವರ ಬಗ್ಗೆ ನನ್ನದು no comments.

(ಶ್ರೀಹರಿಯ ಅವತಾರಗಳಲ್ಲಿ ವ್ಯತ್ಯಾಸವನ್ನು ಎಣಿಸುವುದು, ತಪ್ಪು ತಿಳಿಯುವುದು ಸಹ ದೋಷದಾಯಕವಾದ ಯೋಚನೆಗಳೇ. ಉದಾ:- ವಿಷ್ಣುವಿನ ಬೌದ್ಧಾವತಾರವನ್ನು ಆಧುನಿಕ ಕಾಲದ ಗೌತಮಬುದ್ಧನೊಂದಿಗೆ ಸಮೀಕರಿಸುವುದು, ರಾಮ ಹಾಗು ಕೃಷ್ಣನ ಸಾಮರ್ಥ್ಯಗಳಲ್ಲಿ ವ್ಯತ್ಯಾಸವಿದೆ ಎಂದು ಭಾವಿಸುವುದು, ಬಲರಾಮನನ್ನು ವಿಷ್ಣುವಿನ ಅವತಾರವೆಂದು ಭಾವಿಸುವುದು ಇತ್ಯಾದಿ.

ಸಮಯ ಸಿಕ್ಕಾಗ/ದೇವರ ದಯೆ ಮೂಡಿದಾಗ ಇದರ ಬಗ್ಗೆ ಒಂದು ಲೇಖನವನ್ನು ಬರೆಯಬೇಕು. ನೋಡೋಣ.)

ಶ್ರೀಮನ್ನಾರಾಯಣನ ಚಿತ್ರವನ್ನು ನಾನು ತೆಗೆದುಕೊಂಡದ್ದು : http://www.hdwallpapersact.com/wp-content/gallery/vishnu/vishnu-ji-mata-laxmi-narad-and-hanuman.jpg ಇಲ್ಲಿಂದ.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಪುಣ್ಯಕಾರ್ಯವು ರಕ್ಷಾಕವಚವಾಗುವುದು

ವನೇ ರಣೇ ಶತ್ರುಜಲಾಗ್ನಿಮಧ್ಯೇ ಮಹಾರ್ಣವೇ ಪರ್ವತಮಸ್ತಕೇ ವಾ
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||

ಕಾನನದಲ್ಲಿ, ಯುದ್ಧರಂಗದಲ್ಲಿ, ಶತ್ರುಗಳಮಧ್ಯದಲ್ಲಿ,  ನೀರಿನಲ್ಲಿನಲ್ಲಿ, ಬೆಂಕಿಯ ಮಧ್ಯದಲ್ಲಿ, ಸಮುದ್ರದ ಸೆಳೆತಕ್ಕೆ ಸಿಲುಗಿದಾಗ, ಪರ್ವತದ ನೆತ್ತಿಯ ಮೇಲೆ,  ಪ್ರಜ್ಞೆ ತಪ್ಪಿ ಬಿದ್ದಾಗ ಅಥವಾ ಇನ್ನಾವುದೇ ರೀತಿಯ ವಿಷಮ ಗಳಿಗೆಯಲ್ಲಿ ಸಿಲುಕಿರುವವರನ್ನು ಹಿಂದೆ ಮಾಡಿರುವ ಪುಣ್ಯಕಾರ್ಯಗಳೇ ರಕ್ಷಿಸುತ್ತವೆ.

– ಭರ್ತೃಹರಿ

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts