ಪಿಡಿಎಫ್ ಗಳನ್ನು ಲೇಖಕನ ಅಥವಾ ಪ್ರಕಾಶಕರ ಅನುಮತಿಯಿಲ್ಲದೆ ಪರಸ್ಪರರಲ್ಲಿ ಹಂಚಿಕೊಳ್ಳುವುದು ಕಳ್ಳತನವೇ ಹೌದು. ಗ್ರಂಥವೊಂದನ್ನು ಮುದ್ರಿಸಿ, ಪ್ರಚುರಪಡಿಸುವಲ್ಲಿ ಪ್ರಕಾಶಕನು ಬೆವರನ್ನಲ್ಲ, ರಕ್ತವನ್ನೇ ಬಸಿದಿರುತ್ತಾನೆ ಎಂಬುದು ಕ್ರೂರವಾದ ಸತ್ಯ. ಈ ಮಾತು ಕನ್ನಡಗ್ರಂಥಗಳ ಮಟ್ಟಿಗೆ ಹೆಚ್ಚು ಅನ್ವಯಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾಶನದ ಮಟ್ಟಿಗಂತೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಅನ್ವಯಿಸುವುದು. ಧರ್ಮಶಾಸ್ತ್ರಗ್ರಂಥಗಳನ್ನು ಮುದ್ರಿಸಿ ಲಾಭಗಳಿಸುವುದು ಎಂದರೆ ಸಶರೀರನಾಗಿ ಸ್ವರ್ಗಕ್ಕೆ ಹೋಗುವ ಬಯಕೆಯಂತೆಯೇ ಆಗಿದೆ. ಇದು ಕಹಿಯಾದ ವಾಸ್ತವವು.