Tag: Bhagavata

December 7, 2018 / / Articles

ದುಃಖವನ್ನು ತಡೆಯದೆ, ಕಣ್ಣುಗಳೆರಡನ್ನೂ ಮುಚ್ಚಿ, ಕೃಷ್ಣ ಕೃಷ್ಣ…. ಎನ್ನುತ್ತಲೇ ಇರುವಂತೆ… ಜನರ ಮಧ್ಯದಿಂದ ಮತ್ತೊಮ್ಮೆ ಬಂಗಾರದ ಹೊಳೆಯಂತೆ ಬೆಳಕು ಬಂದಿತು. ಕಂಗಳ ಒಳಪಟಲಕ್ಕೆ ಆ ಬೆಳಕು ಸೋಕಿದ್ದೇ ತಡ. ಕಂಬನಿ ತುಂಬಿದ ತನ್ನ ಕಣ್ಣೆವೆಗಳನ್ನು ನಿಧಾನವಾಗಿ ತೆರೆದಳು ಕುಬ್ಜೆ. ಅಷ್ಟೇ!. ಹೃದಯವು ಒಮ್ಮೆಗೇ, ಒಂದೇ ಬಾರಿ ಸದ್ದು ಮಾಡಿ ನಿಂತೇ ಹೋದಂತಾಯಿತು. ಬಂದದ್ದು ಬೆಳಕು ಮಾತ್ರವಲ್ಲ. ತನ್ನ ಹೃದಯಪ್ರಕಾಶದ ಒಡೆಯನೇ ನಡೆದು ಬಂದಿದ್ದ!

October 18, 2018 / / Articles

ಶ್ರೀಹರಿಯು ಸ್ವಪ್ನಾವಸ್ಥೆಯಲ್ಲಿ ಯಾರಿಗೆ ಹೇಗೆ ಪ್ರೇರಣೆ ಮಾಡುತ್ತಾನೋ ಹೇಳಲಾಗದು. ಜ್ಞಾನಿಗಳು ಮತ್ತು ಆಚಾರಶೀಲರಾದವರಿಗೆ ಅವನ ಪ್ರಾಶಸ್ತ್ಯವೆನ್ನುವುದು ಖಂಡಿತ. ಆದರೆ ಎಷ್ಟೋ ಬಾರಿ ಮೇಲ್ನೋಟಕ್ಕೆ ಅತ್ಯಂತ ಸಾಧಾರಣಸ್ವರೂಪದಲ್ಲಿ ಕಾಣುವ ಜನರಿಗೂ ಅವನಿಂದ ವಿಶೇಷವಾದ ಅನುಭವಗಳಾಗಿರುತ್ತವೆ. ಇಂತಹುದೇ ಒಂದು ಮೈನವಿರೇಳಿಸುವ ಒಂದು ಘಟನೆಯು ನನ್ನ ಅರಿವಿಗೆ ಬಂದಿತು.