ಶುಕಾಚಾರ್ಯರಿಂದಲೇ ಮೊಟ್ಟಮೊದಲ ಭಾಗವತ ಸಪ್ತಾಹವು ನಡೆದ ಕ್ಷೇತ್ರಕ್ಕೆ ಈಗ ಶುಕಸ್ಥಲ ಎಂದೇ ಹೆಸರು. ಇದು ಇಂದಿನ ಉತ್ತರಪ್ರದೇಶದಲ್ಲಿದೆ. ದೆಹಲಿಯಿಂದ ಹರಿದ್ವಾರಕ್ಕೆ ಹೋಗುವಾಗ ಮುಜಫ್ಫರಪುರ ಎಂಬ ಜಿಲ್ಲಾ ಕೆಂದ್ರವು ಸಿಗುತ್ತದೆ. ಶುಕಸ್ಥಲವು ಈ ಜಿಲ್ಲೆಗೆ ಸೇರಿರುವ ಒಂದು ಪಟ್ಟಣ. ಹರಿದ್ವಾರದಿಂದ ದಕ್ಷಿಣಕ್ಕೆ ಸುಮಾರು 90 ಕಿ.ಮೀ ದೂರದಲ್ಲಿ ಈ ಊರು ಇದೆ. ಉತ್ತರದವರು ಇದಕ್ಕೆ ಶುಕ್ರತಾಲ್ ಎಂದು ಕರೆಯುತ್ತಾರೆ.
Tag: articles
ಪಿಡಿಎಫ್ ಗಳನ್ನು ಲೇಖಕನ ಅಥವಾ ಪ್ರಕಾಶಕರ ಅನುಮತಿಯಿಲ್ಲದೆ ಪರಸ್ಪರರಲ್ಲಿ ಹಂಚಿಕೊಳ್ಳುವುದು ಕಳ್ಳತನವೇ ಹೌದು. ಗ್ರಂಥವೊಂದನ್ನು ಮುದ್ರಿಸಿ, ಪ್ರಚುರಪಡಿಸುವಲ್ಲಿ ಪ್ರಕಾಶಕನು ಬೆವರನ್ನಲ್ಲ, ರಕ್ತವನ್ನೇ ಬಸಿದಿರುತ್ತಾನೆ ಎಂಬುದು ಕ್ರೂರವಾದ ಸತ್ಯ. ಈ ಮಾತು ಕನ್ನಡಗ್ರಂಥಗಳ ಮಟ್ಟಿಗೆ ಹೆಚ್ಚು ಅನ್ವಯಿಸುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾಶನದ ಮಟ್ಟಿಗಂತೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಅನ್ವಯಿಸುವುದು. ಧರ್ಮಶಾಸ್ತ್ರಗ್ರಂಥಗಳನ್ನು ಮುದ್ರಿಸಿ ಲಾಭಗಳಿಸುವುದು ಎಂದರೆ ಸಶರೀರನಾಗಿ ಸ್ವರ್ಗಕ್ಕೆ ಹೋಗುವ ಬಯಕೆಯಂತೆಯೇ ಆಗಿದೆ. ಇದು ಕಹಿಯಾದ ವಾಸ್ತವವು.
ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ ಈ ಶ್ಲೋಕವು ಸ-ಮಂಜ-ಸವೇ ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.
ತಿರುಮಲೆಯಲ್ಲಿ ಶ್ರೀಶ್ರೀನಿವಾಸನಿಗೆ ಬಕುಲಾದೇವಿಯು ತಾಯಿಯಾಗಿದ್ದು ಅವನ ಸೇವೆ ಮಾಡಿದ್ದು ಎಲ್ಲರಿಗೂ ಗೊತ್ತು. ಸ್ವಾಮಿಗೆ ಪ್ರತಿದಿನವೂ ಅವಳು ವಿವಿಧ ರೀತಿಯ ಖಾದ್ಯಗಳನ್ನು…
ದ್ವೈತಮತದ ಯತಿಶ್ರೇಷ್ಠರುಗಳಲ್ಲಿ ಶ್ರೀವಿಬುಧೇಂದ್ರತೀರ್ಥರು ಧೃವನಕ್ಷತ್ರದಂತೆ ಕಂಗೊಳಿಸುತ್ತಿರುವ ಮಹಾ ಪ್ರತಿಭಾಸಂಪನ್ನರು. ಇವರ ಕಾಲ ೧೪ನೆಯ ಶತಮಾನ. ಇವರು ಪ್ರತಿನಿತ್ಯ ದ್ವೈತಮತವನ್ನು ಸ್ಥಾಪನೆ…