ಈ ವೈದ್ಯ ಮನೆತನದಲ್ಲಿ “ವಿಠೋಬಾಚಾರ್ಯ” ಎಂಬ ಆಧ್ಯಾತ್ಮಜೀವಿಯ ಹುಟ್ಟು ಆಯಿತು. ದೊಡ್ಡ ಪ್ರತಿಭಾಶಾಲಿಯಾದವರು ಇವರು. ಮನೆತನದ ವೃತ್ತಿಯಾದ ಆಯುರ್ವೇದದೊಂದಿಗೆ ಕನ್ನಡ, ಸಂಸ್ಕೃತ, ಆಂಗ್ಲಭಾಷೆ, ಆಗಿನ ಸರ್ಕಾರಿ ಭಾಷೆಯಾದ ಪರ್ಶಿಯನ್ ಭಾಷೆಗಳಲ್ಲಿ ಇವರಿಗೆ ಒಳ್ಳೆಯ ಪಾಂಡಿತ್ಯವಿತ್ತು. ಆಶುಕವಿಗಳಿವರು. ಜೊತೆಗೆ ಒಳ್ಳೆಯ ಗಣಿತಜ್ಞರು ಕೂಡಾ.