Sri Krishna Janmashtami – Udupi

ಗುರುರಾಯರ ಕೃಪೆಯಿಂದ ಶ್ರೀಕೃಷ್ಣನ ಹುಟ್ಟುಹಬ್ಬದ ಆಹ್ವಾನಪತ್ರಿಕೆಯ ವಿನ್ಯಾಸ ಮಾಡುವ ಅವಕಾಶ ನನಗೆ ದೊರಕಿದ್ದು ನನ್ನ ಅದೃಷ್ಟ. ಪರ್ಯಾಯ ಪೀಠಾಧಿಪತಿಗಳಾದ ಶ್ರೀವಿಶ್ವವಲ್ಲಭತೀರ್ಥರಿಂದ ಇದರ ಬಗ್ಗೆ ಸೂಚನೆ ದೊರೆತು ಸಾಕಷ್ಟು ಸಮಯವೇ ಆಗಿದ್ದರೂ ಏನೇನೋ ಸಬೂಬು ಹೇಳಿ ಕೆಲಸವನ್ನು ಮುಂದೂಡಿ ಅವರಿಗೊಂದಿಷ್ಟು ಟೆನ್ಷನ್ ಮಾಡಿದ್ದಾಯ್ತು. ಆದರೂ ಅವರು ನನ್ನ ತಪ್ಪನ್ನು ಗಮನಿಸದೆ ಶ್ರೀವಾದಿರಾಜರಲ್ಲಿ ಮಾಡಿದ ಪ್ರಾರ್ಥನೆಯ ಬಲದಿಂದ ಉತ್ತಮ ಎನ್ನಬಹುದಾದ ಆಹ್ವಾನಪತ್ರಿಕೆಯೊಂದು ಮೂಡಿ ಬಂದಿತು. ಈ ಪತ್ರಿಕೆಯ ಸೌಂದರ್ಯಕ್ಕೆ ಮೂಲಕಾರಣ ನನ್ನ ಕೆಲಸವೇನಲ್ಲ. ಅದಕ್ಕೆ ಕಾರಣೀಭೂತರು ಈ ಕೆಳಗಿನವರು.

 1. ಜಗದೊಡೆಯನೇ ಆದರೂ ಕದ್ದ ಬೆಣ್ಣೆಯನ್ನು ಮೆಲ್ಲುತ್ತಿರುವ ಕೃಷ್ಣಯ್ಯ!
 2. ತಮ್ಮ ಪೂಜಾಮಗ್ನ ಚಿತ್ರವನ್ನು ಒದಗಿಸಿದ ಶ್ರೀಪಾದಂಗಳವರು
 3. ಆನಂದವೆನಿಸುವ ಭಾವವನ್ನು ಚಿತ್ರದಲ್ಲಿ ಸೆರೆಹಿಡಿದ ಸುಕುಮಾರ ಕೊಡವೂರು (ಸೋದೆ ಪರ್ಯಾಯದ ಫೋಟೊಗಳು ಇವರದ್ದೇ ಕೈಚಳಕ)
 4. ಪ್ರಿಂಟು ಒಂದಿಷ್ಟು ಚಾಲೆಂಜಿಂಗ್ ಆಗಿದ್ದರೂ ಅತಿ ಕಡಿಮೆ ಸಮಯಲ್ಲಿ ಸೂಕ್ಷ್ಮವಾದ ಎಂಬೋಸಿಂಗ್ ಮಾಡಿ ಇನ್ವಿಟಶನ್ನಿಗೆ ಕಳೆತಂದಿತ್ತ ಉಡುಪಿಯ ಮಧುಬನ್  ಗ್ರಾಫಿಕ್ಸ್ ನ ಮಾಲಿಕರು.

kji-cut-final

kji-cut-final2

kji-cut-final3

kji-cut-final4

ಕೊನೆಯ ಫಲಿತಾಂಶ ಬಂದಿದ್ದು ಈ ರೀತಿ!

DSCN8635

DSCN8636

 

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ಶ್ರೀಗುರುರಾಜರ ೩೪೨ನೇ ಆರಾಧನೆ – ಆಹ್ವಾನಪತ್ರಿಕೆ

ಗುರುರಾಜರು ನನ್ನಿಂದ ಮಾಡಿಸಿಕೊಂಡಿರುವ ಕೆಲಸ (ನಾನು ಮಾಡಿದ್ದೇನು ಅಷ್ಟಕ್ಕೂ?? ಡೌಟು!) ಗಳಲ್ಲಿ ಅತಿ ಹೆಚ್ಚಿನ ಕಾಲಾವಧಿಯನ್ನು ತೆಗೆದುಕೊಂಡದ್ದು ಇದು.  ಮುನ್ನೂರ ನಲವತ್ತೆರಡನೆಯ ಆರಾಧನೆಯ ಆಹ್ವಾನ ಪತ್ರಿಕೆಯು ನಾಲ್ಕು ತಿಂಗಳು ಮೊದಲೇ ಬರಬೇಕೆಂದು ಶ್ರೀಗಳವರ ಅಪ್ಪಣೆಯಾಗಿತ್ತು. ಅದರಂತೆ ಸಾಕಷ್ಟು ಮೊದಲೇ ಪ್ರಾರಂಭಿಸಿದರೂ ಕೈಗೆ ಬಂದಾಗ ಆರಾಧನೆಗೆ ಎರಡೇ ತಿಂಗಳುಗಳು ಉಳಿದಿದ್ದವು!

ಈ ಬಾರಿಯ ಆಹ್ವಾನಪತ್ರಿಕೆಯ ಕಲ್ಪನೆ ಗರಿಗೆದರಿದ್ದು ಸುಮಾರು ೧೦ ತಿಂಗಳ ಹಿಂದೆ. ಶ್ರೀಸುಯತೀಂದ್ರ ತೀರ್ಥ ಶ್ರೀಪಾದರ ೭ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಬೆಂಗಳೂರಿನ ಸಹೃದಯಿ ಸ್ನೇಹಿತರಾದ ಅನಿಲಕುಮಾರರು ತಮ್ಮ ಸಂಸ್ಥೆಯ ವತಿಯಿಂದ ಮಂತ್ರಾಲಯದಲ್ಲಿ ದೇಶದ ಅನೇಕ ಕಲಾವಿದರನ್ನು ಒಂದೆಡೆ ಕಲೆಹಾಕಿ “ಶ್ರೀರಾಯರ ಕಲಾ ಕೃಪೆ”  ಎನ್ನುವ ಚಿತ್ರಕಲಾ ಶಿಬಿರವೊಂದನ್ನು ಸಂಘಟಿಸಿದ್ದರು. ಈ ಶಿಬಿರದಲ್ಲಿ ಶ್ರವಣಬೆಳಗೊಳದ ಅನಿಲ್ ಜೈನ್ ಎನ್ನುವ ಕಲಾವಿದರು ರಾಯರು ಹಸುವಿನ ಕರುವೊಂದನ್ನು ಪ್ರೀತಿಯಿಂದ ಮೈದಡವುತ್ತಿರುವ ಚಿತ್ರವನ್ನು ಮೂಡಿಸುತ್ತಿದ್ದರು. ಅದನ್ನು ನೋಡಿದಾಗ ಈ ಬಾರಿಯ ಆಹ್ವಾನಪತ್ರಿಕೆಯ ಕಲ್ಪನೆ ನನ್ನ ತಲೆಯಲ್ಲಿ ಮೊಳೆಯಿತು.

ಆಹ್ವಾನ ಪತ್ರಿಕೆಯು ಕೇವಲ ಬನ್ನಿರಿ ಎನ್ನುವುದಕ್ಕೆ ಸೀಮಿತವಾಗದೆ ಜನಮಾನಸಕ್ಕೆ ಸಂದೇಶವೊಂದನ್ನು ನೀಡುವಂತಿರಬೇಕು ಎಂದು ಆಲೋಚಿಸಿ ಹಸು ಮತ್ತು ಹಸಿರು ಎನ್ನುವ ಕಲ್ಪನೆಯೊಂದಿಗೆ ಕೆಲಸಕ್ಕಿಳಿದು ಹಲವಾರು ಇನ್ನಿತರ ಕೆಲಸಗಳ ಮಧ್ಯ ಸಮಯ ಮಾಡಿಕೊಂಡೇ ಈ ವಿನ್ಯಾಸವನ್ನು ಮುಗಿಸಿದೆ. ಅಂದಾಗ್ಯೂ ಶ್ರೀಗಳವರ ನಿರೀಕ್ಷೆಯ ಮಟ್ಟಕ್ಕಿಂತ ನಾನು ಇನ್ನೂ ಎರಡು ತಿಂಗಳು ಹಿಂದುಳಿದಿದ್ದೇನೆ ಅಂತ ಆಯ್ತು. ರಾಯರ ದಯೆ ಹೀಗೆಯೇ ನನ್ನ ಮೇಲೆ ಇದ್ದಲ್ಲಿ ಶ್ರೀಗಳವರ ನಿರೀಕ್ಷೆಯನ್ನೂ ಆದಷ್ಟು ಬೇಗ ಮುಟ್ಟಿಯೇನು.

ಅಂದ ಹಾಗೆ ನಾನು ಒಬ್ಬ ಅಭಿಜಾತ ಕಲಾವಿದ (Classical Artiste) ಏನಲ್ಲ. ಅವರಿವರು ಮಾಡಿಕೊಟ್ಟದ್ದನ್ನು ಬೇಕಾದ ಚೌಕಟ್ಟಿನಲ್ಲಿ ಕೂರಿಸಿ “ಚೆನ್ನಾಗಿ ಮಾಡಿದ್ದಾನೆ” ಅನ್ನಿಸಿಕೊಳ್ಳುವವ. ಹೀಗಾಗಿ ಈ ಆಹ್ವಾನ ಪತ್ರಿಕೆಗೆ ಬಂದಿರುವ ಸೊಗಸಿನ ಹಿರಿಮೆಯೆಲ್ಲ ಸಲ್ಲಬೇಕಾದದ್ದು ಹಲವಾರು ಜ್ಞಾತ ಅಜ್ಞಾತ ವ್ಯಕ್ತಿಗಳಿಗೆ.

 • ಚಿತ್ರವನ್ನು ಮೂಡಿಸಿದವರು : ಅನಿಲ್ ಜೈನ್ ಶ್ರವಣಬೆಳಗೊಳ
 • ಅವರನ್ನು ಮಂತ್ರಾಲಯಕ್ಕೆ ಕರೆತಂದವರು : ಎಂ. ಕೆ. ಅನಿಲ್ ಕುಮಾರ್, ಬೆಂಗಳೂರು
 • ಎರಡನೆ ಪುಟದಲ್ಲಿರುವ ಮನ್ನಾರುಗುಡಿಯ ರಾಜಗೋಪಾಲಸ್ವಾಮಿಯನ್ನು ಮೋಹಕವಾಗಿ ಮೂಡಿಸಿದವರು : ರಾಘವೇಂದ್ರ ಪ್ರಸಾದ್, ಚೆನ್ನೈ.
 • ಹಿರಿಯ ಶ್ರೀಗಳವರ ಭಾವಚಿತ್ರವನ್ನು ಕ್ಲಿಕ್ಕಿಸಿದವನು : ಶ್ರೀನಿಧಿ, ಮಂತ್ರಾಲಯ
 • ಕಿರಿಯ ಶ್ರೀಗಳವರ ಭಾವಚಿತ್ರವನ್ನು ಕ್ಲಿಕ್ಕಿಸಿದವನು : ರಾಯಚೂರಿನ ಇನಾಂದಾರ್ ಸೀನ (ಒರಿಜಿನಲಿ ಶ್ರೀನಿವಾಸ)
 • ಪ್ರೂಫ್ ನೋಡಿ “ರಘುನಂದನ ಏನೂ ತಪ್ಪು ಮಾಡಿಲ್ಲ” ಅನ್ನುವಂತೆ ಮಾಡಿದವರು : ಜೋಷಿ ಸರ್, ಶಿರೀಷಾ ಶರ್ಮ, ಭಾರ್ಗವಿ ಕೃಷ್ಣಮೂರ್ತಿ, ಬಾಲಾಜಿ ಮಾಮ ಹಾಗು ಚೊಮಿನಿ ಪ್ರಕಾಶ್.
 • ಇಂಟರ್ ನೆಟ್ಟು ಸಹ ನನಗೆ ಹಲವಾರು (ಹಲವಾರು ಏನು? ಬಹುಮಟ್ಟಿಗೆ ಎನ್ನುವುದೇ ಸರಿ) ಸಹಾಯ ಮಾಡಿದೆ.

ಈ ಕೆಳಗೆ ಇನ್ವಿಟೇಶನ್ನಿನ ಪುಟಗಳನ್ನು ಕೊಟ್ಟಿದ್ದೇನೆ. ಡೌನ್ ಲೋಡ್ ಮಾಡಿಕೊಳ್ಳಿ. ಇತರೆಡೆಗೆ ಶೇರ್ ಮಾಡಿಕೊಳ್ಳುವ ಮುನ್ನ ಈ ಚಿತ್ರಗಳೆಲ್ಲ ಮಂತ್ರಾಲಯ ಮಠದ ಸ್ವಾಮ್ಯಕ್ಕೆ ಒಳಪಟ್ಟಿವೆ ಎನ್ನುವುದನ್ನು ಮರೆಯದಿರಿ.

ಕೊನೆಯದಾಗಿ : ಕೆಲವೊಂದು ಆನ್ ಲೈನ್ ಮಾಧ್ವ ಯುವ ವೇದಿಕೆಗಳು ಶ್ರೀಮಠದ ವೆಬ್ ಸೈಟಿನಿಂದ ಚಿತ್ರಗಳನ್ನು “ತಾವೇ ಸಂಪಾದಿಸಿದ್ದು” ಎನ್ನುವಂತೆ ಮಠದ ವಾಟರ್ ಮಾರ್ಕನ್ನು ಕ್ರಾಪ್ ಮಾಡಿ ಶೇರ್ ಮಾಡುವದನ್ನು ನಾನು ಗಮನಿಸಿದ್ದೇನೆ.  ಮಾಧ್ವರಿಗೆ ಮಾಹಿತಿ ಕೊಡುವ ಭರದಲ್ಲಿ ಅವರು ಚಿತ್ರದ ಮೂಲವನ್ನು ಆಳಿಸಿಹಾಕುತ್ತಿರುವುದು ಖೇದಕರ. ರಾಯರು ಅವರಿಗೆ ಬುದ್ದಿ ಕೊಡಲಿ.

ಸಂಪೂರ್ಣ ಆಹ್ವಾನ ಪತ್ರಿಕೆಯನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ

Download (ಈ ಫೈಲು 1.2 MB ಇದೆ.)

ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಮುಖಪುಟ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಮಂಗಳಾಶಂಸನ – ರಾಜಗೋಪಾಲಸ್ತುತಿ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಆಹ್ವಾನ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಆರಾಧನಾ ಜ್ಞಾನಯಜ್ಞ ಹಾಗು ಪ್ರೋಷ್ಠಪದೀ ವಿಶೇಷ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಸಾಂಸ್ಕೃತಿಕ ಕಾರ್ಯಕ್ರಮಗಳು
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಚಾತುರ್ಮಾಸ್ಯ ದೀಕ್ಷಾ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಕಳೆದ ವರ್ಷದ ಅಭಿವೃದ್ಧಿಯ ವಿವರಣೆ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ದಾನಗಳ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಹಸಿರು ಮಂತ್ರಾಲಯದ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಹಸಿರುವ ಮಂತ್ರಾಲಯದ ವಿವರ
ಶ್ರೀ ರಾಯರ ೩೪೨ನೇ ಆರಾಧನೆ
ಶ್ರೀ ರಾಯರ ೩೪೨ನೇ ಆರಾಧನೆ – ಶ್ರೀಗುರುರಾಜರ ಕರುಣೆಯ ಕಂದ ಶ್ರೀಸುಶಮೀದ್ರರು

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ವಾಲ್ ಪೇಪರುಗಳು : ಭಾಗ ೧

ಶ್ರೀಮಠದ ಫೇಸ್ ಬುಕ್ ಪ್ರೋಫೈಲಿಗೆ ಲವಲವಿಕೆ ತಂದು ಕೊಡಲು ಆಗಾಗ ಚಿತ್ರಿಸಿದ ವಾಲ್ ಪೇಪರುಗಳಿವು. ಚಿತ್ರಿಸಿದ ಎಂದ ಮಾತ್ರಕ್ಕೆ ನಾನೇ ನನ್ನ ಕೈಯಾರ ಚಿತ್ರಿಸಿದ್ದು ಅಂದುಕೊಳ್ಳದಿರಿ. ಪ್ರತಿಭಾಶಾಲಿಗಳಾದ ಬೇರೆ ಬೇರೆ ಫೋಟೋಗ್ರಾಫರುಗಳು ತೆಗೆದ ಫೋಟೋಗಳ ಮೇಲೆ ಚಂದವೆನಿಸುವ ವೈದಿಕ / ಪೌರಾಣಿಕ ಶೀರ್ಷಿಕೆಗಳನ್ನು ಹಾಕಿ ಅಪ್ಲೋಡ್ ಮಾಡಿದ್ದಷ್ಟೇ ನನ್ನ ಕೆಲಸ. ಕೊನೆಯ ಅಕ್ಷಯ್ಯ/ಅಕ್ಷಯ ತೃತೀಯಾದ ರಚನೆಯಲ್ಲಿರುವ ರಾಯರ ಚಿತ್ರ ಜಗತ್ಪ್ರಸಿದ್ಧ ಕಲಾವಿದರಾದ ಬಿ.ಕೆ.ಎಸ್. ವರ್ಮಾರ ಕಲಾಕೃತಿ. ಈ ಎಲ್ಲ ಮಹನೀಯರ ಶ್ರಮವನ್ನು ನಿಮ್ಮೆಡೆ ತಂದುಕೊಡುವ ಭಾಗ್ಯದಿಂದ ನನಗೆ ಸಂತಸದ ಲಾಭ. ಮೆಚ್ಚುಗೆಯಾದರೆ ಕೆಳಗೆ ಕಮೆಂಟ್ ಬಾಕ್ಸಿನಲ್ಲಿ ಬರೆಯಿರಿ.  ಏನು ಮಾಡಿದರೆ ಚಂದ ಎಂದು ತಿಳಿಸಿದರೆ ಇನ್ನೂ ಆನಂದ.

ಸ್ವಸ್ತಿ ಪಂಥಾಮನುಚರೇಮ
ಸ್ವಸ್ತಿ ಪಂಥಾಮನುಚರೇಮ
ಮಾತೃ ದೇವೋಭವ
ಮಾತೃ ದೇವೋಭವ
ಪಿತೃ ದೇವೋ ಭವ
ಪಿತೃ ದೇವೋ ಭವ
ಬಹುಚಿತ್ರ ಜಗತ್ -೧
ಬಹುಚಿತ್ರ ಜಗತ್ -೧
ಅಕ್ಷಯ ತೃತೀಯಾ ೨೦೧೩
ಅಕ್ಷಯ ತೃತೀಯಾ ೨೦೧೩

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts