ಈ ಕಷಾಯವನ್ನು ಅನುಭವಸ್ಥರ ಕೈಯಿಂದಲೇ ತಯಾರಿಸಿ ಪಡೆಯಬೇಕು. ಮನಸ್ಸಿಗೆ ಬಂದಂತೆ ಮಾಡಿಕೊಂಡು ಕುಡಿದರೆ ವಿಪರೀತವಾದ ಪರಿಣಾಮಗಳೂ ಆಗಬಲ್ಲವು.
Category: General Knowledge
ನೀರಿಲ್ಲ ಎನ್ನುವುದು ಸಾವುದಕೆ ಕಾರಣವೇ ಅಲ್ಲ ಇದಕ್ಕೆ. ತುಂಡು ಮಾಡಿ ಎಸೆದರೆ ತಂಡ ತಂಡವಾಗಿ ಬರುತ್ತೇನೆ ಎನ್ನುತ್ತದೆ. ಪ್ರಾಣವನ್ನು ಅಧಿಕೃತವಾಗಿ ತ್ಯಾಗ ಮಾಡುವುದು ಏನಿದ್ದರೂ ಧನ್ವಂತರಿದೇವನ ಹೆಸರಿನಲ್ಲಿ ಮಾತ್ರ.
ಅಂತೂ ಮುಂದಿನ ೨೫-೪೦ ವರ್ಷಗಳಲ್ಲಿ ಹುಟ್ಟುವ ಪೀಳಿಗೆಯು ನೂರು ರುಪಾಯಿಗೆ ಕೊಟ್ಟು ಲೀಟರು ನೀರು ಕುಡಿಯುವಂತಾದರೆ ಅಚ್ಚರಿ ಏನಿಲ್ಲ. ಯಾರನ್ನು? ಏನೆಂದು ದೂಷಿಸಬೇಕಿದಕ್ಕೆ?
ಗ್ರೀಸ್ ದೇಶವು ರುಪಾಯಿ ಎಂಬ ಕರೆನ್ಸಿಯನ್ನು ಯಾಕಾದರೂ ಇಟ್ಟುಕೊಂಡೀತು ಎಂಬ ಸಾಮಾನ್ಯಜ್ಞಾನವೂ ಇಲ್ಲದಿರುವ ಜನ ಇದನ್ನು ನೋಡಿ ಹೃದಯ ತುಂಬಿಕೊಳ್ಳುತ್ತಿದ್ದಾರೆ. ಪ್ರಪಂಚದ ಎಲ್ಲೆಡೆಯೂ ಕನ್ನಡವೇ ರಾರಾಜಿಸಲಿ. ನಮಗೂ ಸಂತೋಷವೇ ಅದು. ಆದರೆ ಇಲ್ಲದಿರುವ ಕಿರೀಟದ ಮೇಲೆ ಈ ತುರಾಯಿಯನ್ನು ಸಿಕ್ಕಿಸಿಕೊಳ್ಳುವ ಚಪಲ ಯಾಕೆ?
ಅರಳುಮಲ್ಲಿಗೆ ಅನ್ನುವ ಚಿಕ್ಕ ಊರು (ನಿಜವಾಗಿಯೂ ಅದೆಷ್ಟು ದೊಡ್ಡದಿದೆ ಅಂತ ನನಗೆ ಗೊತ್ತಿಲ್ಲ, ಗೂಗಲ್ ಮ್ಯಾಪಿನಲ್ಲಿ ಇನ್ನೂ ಸ್ಪಷ್ಟವಾದ ಚಿತ್ರಗಳು…