ಶ್ರೀದಾಸರು ತಮ್ಮೊಳಗಿರುವ ಎಲ್ಲ ದುಗುಡಗಳನ್ನು ಹೊರಹೊಮ್ಮಿಸಿ, ಶ್ರೀಶ್ರೀನಿವಾಸನನ್ನು ಬಗೆಬಗೆಯಾಗಿ ಕೇಳುವ ಒಂದು ಕೃತಿಯುಂಟು. ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸ ಎಂಬುದು. ಅದನ್ನೇ ನಮ್ಮ ಗುರಣ್ಣನವರು ಇಲ್ಲಿ ಹಾಡಿರುವುದು. ಬಹಳ ಚೆನ್ನಾಗಿ ಅದನ್ನು ಅನುಭವಿಸುತ್ತಾ ಹಾಡಿದ್ದಾರೆ. ಹಾಡು ಕೇಳಿ ಸಂತೋಷವಾದಲ್ಲಿ ಮುಂದೆ ಸಂಪೂರ್ಣವಾಗಿ ಅದನ್ನು ಕಲಿಯಲು ಇಲ್ಲಿ ಕೆಳಗೆ ಸಾಹಿತ್ಯವನ್ನು ನೀಡಿದ್ದೇನೆ. ಕಲಿಯಬಹುದು.
Category: Songs and Stotras
ಗುರಣ್ಣ ಅವರು ಶ್ರೀಗುರುಗಳ, ಮುಖ್ಯಪ್ರಾಣರ ಮತ್ತು ಶ್ರೀಕೃಷ್ಣದೇವರ ಕೃಪೆಗೆ ಪಾತ್ರರಾದವರು. ಸಾಕಷ್ಟು ಸಂಪತ್ತನ್ನೂ ಮತ್ತು ಮನಸಾರೆಯಾಗಿ ಆ ಸಂಪತ್ತನ್ನು ದಾನ ಮಾಡುವ ಉದಾರ ಹೃದಯವನ್ನೂ ಅವರಿಗೆ ದಯಪಾಲಿಸಿದ್ದಾರೆ ಹರಿವಾಯುಗುರುಗಳು. ಆದರೂ ಚೂರೂ ಅಹಂಕಾರವನ್ನು ಬೆಳೆಸಿಕೊಳ್ಳದೆ ಎಲ್ಲರೊಂದಿಗೂ ಅಣ್ಣ ಅಣ್ಣ ಎಂದೇ ಮಾತನಾಡಿಸುವ ಸಜ್ಜನ ಇವರು. ಇಂತಹ ಸೌಜನ್ಯ ಇರುವುದರಿಂದಲೇ ಏನೋ ಇವರ ಹಾಡು ಬಾಯಿಯಿಂದ ಬರದೆ, ಹೃದಯದಿಂದ ಹೊರಬರುತ್ತದೆ.
ನೀ ಕರುಣದಿಂದ ಪಾಲಿಸದೆ ಇದ್ದರೆ ಇನ್ನುನಾಕಾಣೆ ಮನ್ನಿಸುವರ ಸಾಕಾರಿ ರೂಪ ಸರ್ವೋತ್ತಮನೆ ಸಲಹೊ ಪರಾಕು ಮಾಡದೆ ಎನ್ನನು ಗುರುಹಿರಿಯರನು ಕಂಡು…
ಹರಿಪಾದವಿರಲಿಕೆ ಪರದೈವಂಗಳಿಗೆ ಎರಗಲೇಕೆ? ವರಮಾಣಿಕವಿದ್ದು ಎರವಿನ ಒಡವೆಯ ಬಯಸಲೇಕೆ? ಪೆತ್ತ ಪಿತನ ಮಾತು ಕಿವಿಯಲಿ ಕೇಳದ ಪುತ್ರನೇಕೆ? ಚಿತ್ತಪಲ್ಲಟವಾಗಿ ತಿರುಗುವ…
ಉರಿಗಂಜೆ ಸಿರಿಗಂಜೆ ಶರಧಿಯ ಭಯಕಂಜೆ ಹಾವಿಗಂಜೆ ಕತ್ತಿಯ ಧಾರೆಗಂಜೆ ಒಂದಕಂಜುವೆ, ಒಂದಕಳುಕುವೆ ಈ ಪರಧನ, ಪರಸತಿ ಎರಡಕ್ಕೆ ಹಿಂದೆ ಮಾಡಿದ…
“ಚೆನ್ನಾಗಿ” ಬದುಕಬೇಕೆಂಬ ಇಚ್ಛೆ ಎಷ್ಟು ಜನಕ್ಕಿರುವುದೋ ಏನೋ ಗೊತ್ತಿಲ್ಲ. ಆದರೆ ಬದುಕಲೇಬೇಕೆನ್ನುವ ಇಚ್ಛೆಯಂತೂ ಎಲ್ಲರಿಗೂ ಚೆನ್ನಾಗಿಯೇ ಇರುವುದು. ದೇವರೇನೋ ಬದುಕಬೇಕೆನ್ನುವ…
ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರ
ಕೈಮೀರಿ ಹೋದದ್ದೆ ಕೃಷ್ಣಾರ್ಪಣ
ಮೈಮನೋವೃತ್ತಿಗಳೆ ವಿಷಯದಲಿ ವೈರಾಗ್ಯ
ಹೊಯ್ಮಾಲಿತನವೆಲ್ಲ ಹರಿಯ ವಿಹಾರ
ಕಣ್ಣಿಲಿ ಕೃಷ್ಣಾಕೃತಿ ನೋಡದೆ ಪರ ಹೆಣ್ಣಿನ ನೋಡುವ ತಪ್ಪು
ನಿನ್ನ ಕಥಾಮೃತ ಕೇಳದೆ ಹರಟೆಯ ಮನ್ನಿಸುವ ಕಿವಿ ತಪ್ಪು
ಅನ್ನವ ನಿನಗರ್ಪಿಸದಜ್ಞಾನದಿ ಉಣ್ಣುವ ನಾಲಿಗೆ ತಪ್ಪು
ಚಿನ್ಮಯ ಚರಣಕ್ಕೆರಗದೆ ಇಹ ಉನ್ಮತ್ತರ ನಮಿಸುವ ಶಿರ ತಪ್ಪು