ಕೆಲ ದಿನಗಳ ಹಿಂದೆ ಇದಕ್ಕಿದ್ದಂತೆ ಇವತ್ತು ವರಾಹ ಜಯಂತಿ ಇರಬೇಕು ಅನ್ನಿಸಿತು. ಯಾಕೆ ಹಾಗೆನ್ನಿಸಿತೋ ಆ ವರಾಹದೇವನೇ ಬಲ್ಲ! ಅವತ್ತು ವರಾಹಜಯಂತಿ ಇರಲಿಲ್ಲ. ಆದರೂ ಹಿಂದೆ ಮುಂದೆ ಆಲೋಚನೆ ಮಾಡದೆ ವರಾಹದೇವರ ಒಂದು ವಾಲ್ ಪೇಪರ್ ಡಿಜ಼ೈನ್ ಮಾಡೋಣ ಎನಿಸಿ ಈ ಮೇಲಿನ ಚಿತ್ರವನ್ನು ಮೂಡಿಸಿದೆ. ನಂತರ ಪಂಚಾಂಗ ತೆಗೆದು ನೋಡಿದರೆ ಅವತ್ತು ಏನೂ ಇರಲಿಲ್ಲ. ವಾಸ್ತವವಾಗಿ ವರಾಹ ಜಯಂತಿ ಬರುವುದು ದೀಪಾವಳಿಯ ಮುನ್ನಾದಿನಗಳಲ್ಲಿ. ಆ ಸಂದರ್ಭದಲ್ಲಿಯೇ ಅಲ್ಲವೇನು ವರಾಹನ ನರಕನನ್ನು ಕೊಂದಿದ್ದು!
ವೈಡ್ ಸ್ಕ್ರೀನ್ ಮಾನಿಟರುಗಳಲ್ಲಿ ಈ ವಾಲ್ ಪೇಪರ್ ನೋಡಲು ಬಲು ಚೆಂದ.
೦೭.೦೯.೨೦೧೩: ಇನ್ನೊಂದು ಅಪ್ಡೇಟ್ : ನನ್ನ ಬುದ್ದಿಗೆ ಸೆಗಣಿ ಮೆತ್ತಿಕೊಂಡಿತ್ತೋ ಏನು ಗೊತ್ತಿಲ್ಲ. ಏನೇನೋ ಬರೆದಿದ್ದೇನೆ. ವರಾಹಜಯಂತಿ ಬರುವುದು ದೀಪಾವಳಿಯ ಸಂದರ್ಭದಲ್ಲಿ ಅಲ್ಲ. ಅದಿರುವುದು ನಾಳೆಯೇ!
Be First to Comment