ಧರಣಿಯನುದ್ಧರಿಸಿದ ದೇವ!

Lord Sri Varaha with Bhoodevi
Lord Sri Varaha with Bhoodevi

ಕೆಲ ದಿನಗಳ ಹಿಂದೆ ಇದಕ್ಕಿದ್ದಂತೆ ಇವತ್ತು ವರಾಹ ಜಯಂತಿ ಇರಬೇಕು ಅನ್ನಿಸಿತು. ಯಾಕೆ ಹಾಗೆನ್ನಿಸಿತೋ ಆ ವರಾಹದೇವನೇ ಬಲ್ಲ! ಅವತ್ತು ವರಾಹಜಯಂತಿ ಇರಲಿಲ್ಲ. ಆದರೂ ಹಿಂದೆ ಮುಂದೆ ಆಲೋಚನೆ ಮಾಡದೆ ವರಾಹದೇವರ ಒಂದು ವಾಲ್ ಪೇಪರ್ ಡಿಜ಼ೈನ್ ಮಾಡೋಣ ಎನಿಸಿ ಈ ಮೇಲಿನ ಚಿತ್ರವನ್ನು ಮೂಡಿಸಿದೆ. ನಂತರ ಪಂಚಾಂಗ ತೆಗೆದು ನೋಡಿದರೆ ಅವತ್ತು ಏನೂ ಇರಲಿಲ್ಲ. ವಾಸ್ತವವಾಗಿ ವರಾಹ ಜಯಂತಿ ಬರುವುದು ದೀಪಾವಳಿಯ ಮುನ್ನಾದಿನಗಳಲ್ಲಿ. ಆ ಸಂದರ್ಭದಲ್ಲಿಯೇ ಅಲ್ಲವೇನು ವರಾಹನ ನರಕನನ್ನು ಕೊಂದಿದ್ದು!

ವೈಡ್ ಸ್ಕ್ರೀನ್ ಮಾನಿಟರುಗಳಲ್ಲಿ ಈ ವಾಲ್ ಪೇಪರ್ ನೋಡಲು ಬಲು ಚೆಂದ.

೦೭.೦೯.೨೦೧೩: ಇನ್ನೊಂದು ಅಪ್ಡೇಟ್ : ನನ್ನ ಬುದ್ದಿಗೆ ಸೆಗಣಿ ಮೆತ್ತಿಕೊಂಡಿತ್ತೋ ಏನು ಗೊತ್ತಿಲ್ಲ. ಏನೇನೋ ಬರೆದಿದ್ದೇನೆ.  ವರಾಹಜಯಂತಿ ಬರುವುದು ದೀಪಾವಳಿಯ ಸಂದರ್ಭದಲ್ಲಿ ಅಲ್ಲ. ಅದಿರುವುದು ನಾಳೆಯೇ!

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.