ಜಿಟಾಕ್ ನಲ್ಲಿ ಕಣ್ಣಾಮುಚ್ಚಾಲೆಯಾಟ

ಇದು ಗೂಗಲ್ ಚಾಟಿನಲ್ಲಿ ಅವಿತುಕೊಂಡೇ ಕಾರ್ಯತತ್ಪರರಾಗಿರುವ “ಗೆರಿಲ್ಲಾ”ಗಳಿಗೆ ಉಪಯುಕ್ತವಾಗಬಲ್ಲ ಲೇಖನ.

ಕೆಲವೊಮ್ಮೆ ಮೊಬೈಲ್ ಫೋನಿನಿಂದ ಗೂಗಲ್ ಪ್ರಾಡಕ್ಟ್ ಒಂದಕ್ಕೆ ಲಾಗಿನ್ ಆಗುವ ಪ್ರಸಂಗ ಬರುತ್ತದೆ. ಉದಾ: ಗೂಗಲ್ ಹ್ಯಾಂಗೌಟ್ಸ್!. ಯಾವುದೋ ಒಂದು ಉದ್ದೇಶಕ್ಕೆ ಗೂಗಲ್ಲಿನ ಈಮೈಲ್  ಅಪ್ಲಿಕೇಶನ್ ಅನ್ನು ಬಳಸಿದಾಗ ಅದು ಗೂಗಲ್ಲಿನ ಸಂಬಂಧಪಟ್ಟ ಇನ್ನಿತರ ಅಪ್ಲಿಕೇಶನ್ನುಗಳಲೆಲ್ಲ ಲಾಗಿನ್ ಆಗಿಬಿಟ್ಟಿರುತ್ತದೆ. ನಂತರದಲ್ಲಿ ಪುನಃ ಜೀಮೇಲನ್ನು ಡೆಸ್ಕ್ ಟಾಪ್ ವರ್ಷನ್ನಿನಲ್ಲಿ ತೆಗೆದಾಗ ಅಲ್ಲಿರುವ ಗೂಗಲ್ ಚಾಟ್ ನಿಮ್ಮನ್ನು ಇನ್ವಿಸಿಬಲ್ ಮೋಡಿನಲ್ಲಿ ಇರಲು ಬಿಡುವುದಿಲ್ಲ.  ನಿರಂತರವಾಗಿ Oops! You are not invisible because you’re logged into Google Talk from another client, device, or location that doesn’t support invisibility. ಎನ್ನುವ ಸಂದೇಶವು ಮೂಡಿಯೇ ಇರುತ್ತದೆ. ಇದು ಸ್ವಲ್ಪ ಕಿರಿಕಿರಿಯಾಗುವುದು. ಆದರೆ ಇದರ ನಿವಾರಣೋಪಾಯ ಇನ್ನೆಲ್ಲಿಯೋ ಇದೆ. ನಿಮಗೆ ಅದು ಸರಳವಾಗಿ ಗೊತ್ತಾಗದಿದ್ದರೆ  ನೀವು ಒಂದೋ ಸೈನ್ ಔಟ್ ಆಗಬೇಕು. ಅಥವಾ ಅವಿತುಕೊಂಡೇ ಮಾತನಾಡುವ ಚಟವನ್ನು ಬಿಟ್ಟು ರಾಜಾರೋಷವಾಗಿಯೇ ಚಾಟ್ ಮಾಡಬೇಕು.

ನಿಮಗೆ ಕಣ್ಣಾಮುಚ್ಚಾಲೆಯೇ ಹೆಚ್ಚು ಪ್ರೀತಿಯಾಗಿದ್ದಲ್ಲಿ ನೀವು ಹೀಗೆ ಮಾಡಿ.

1. pidgin ಅನ್ನುವ ಒಂದು ಓಪನ್ ಸೋರ್ಸ್ ಪಿ.ಸಿ. ಅಪ್ಲಿಕೇಶನ್ನು ಇದೆ. ಅದನ್ನು ಡೌನ್ ಲೋಡ್ ಮಾಡಿಕೊಳ್ಳಿ. ಇದು ಒಂದೇ ಪ್ಲಾಟ್ ಫಾರಂ
ಇಂದ ಎಲ್ಲ ಬಗ್ಗೆ IRC ಕ್ಲೈಂಟುಗಳನ್ನು ಬಳಸಬಹುದಾದ ಒಂದು ಸಾಫ್ಟ್ ವೇರ್.
2. ಇನ್ಸ್ಟಾಲ್ ಮಾಡಿಕೊಂಡ ಮೇಲೆ ನಿಮ್ಮ ಜಿಮೈಲ್ ಅಕೌಂಟ್ ಅನ್ನು ಇದರೊಂದಿಗೆ ಸೇರಿಸಿ.
3. ನಿಮ್ಮ ಸ್ನೇಹಿತರ ಪಟ್ಟಿ ಅದರಲ್ಲಿ ಪ್ರದರ್ಶಿತವಾದ ಮೇಲೆ cttl+i ಒತ್ತಿರಿ.
4. ಆಗ Buddy Information ತೋರಿಸುವ ಒಂದು ಚಿಕ್ಕ ಡಬ್ಬಿ ಮೂಡುತ್ತದೆ. ಅದರಲ್ಲಿ ನಿಮ್ಮ ಜೀಮೈಲ್ ಐಡಿ ನಮೂದಿಸಿ
5. ನಂತರ ಮೂಡುವ ಇನ್ನೊಂದು ಡಬ್ಬಿಯಲ್ಲಿ ನಿಮ್ಮ ಅಕೌಂಟು ಸಧ್ಯಕ್ಕೆ ಎಲ್ಲೆಲ್ಲಿ ಸಕ್ರಿಯವಾಗಿದೆ ಎನ್ನುವುದು ಮೂಡುತ್ತದೆ.
6. ರಿಸೋರ್ಸ್ ಎಂದು ಬರೆದಿರುವ ಎಲ್ಲವನ್ನೂ ಪ್ರತ್ಯೇಕವಾಗಿ ಕಾಪಿ ಮಾಡಿಕೊಂಡು ನೋಟ್ ಪ್ಯಾಡಿನಲ್ಲಿ ಪೇಸ್ಟ್ ಮಾಡಿಟ್ಟುಕೊಳ್ಳಿ.
7. ನಿಮ್ಮ ಅಕೌಂಟಿನಿಂದ ಲಾಗ್ ಔಟ್ ಆಗಿರಿ.
8. ಪಿಡ್ಜಿನ್ ಅಕೌಂಟ್ಸ್ ಮೆನು ಒಳಗಿರುವ ಮ್ಯಾನೇಜ್ ಅಕೌಂಟ್ಸ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಜೀಮೈಲ್ ಅಕೌಂಟನ್ನು ಸಂಪೂರ್ಣ ತೆಗೆದು ಹಾಕಿರಿ.
(ಇದು ನಿಮ್ಮ ಜೀಮೈಲ್ ಐಡಿಯನ್ನೇನೂ ಡಿಲೀಟ್ ಮಾಡುವುದಿಲ್ಲ. ಹಾಗಾಗಿ ಭಯ ಪಡದಿರಿ)
9.  ಪುನಃ ಅಕೌಂಟ್ ಮ್ಯಾನೇಜರಿನಲ್ಲಿ ನಿಮ್ಮ ಐಡಿ ನಮೂದಿಸಿ, ಅದರ ಕೆಳಗೆ ಇರುವ ರಿಸೋರ್ಸ್ ಖಾನೆಯಲ್ಲಿ ನೋಟ್ ಪ್ಯಾಡಿನಲ್ಲಿರುವ ಒಂದು
ರಿಸೋರ್ಸನ್ನು ಹಾಕಿರಿ. ಪಾಸ್ವರ್ಡ್ ಕೊಟ್ಟು ಲಾಗಿನ್ ಆಗಿರಿ.
10. ನಿಮ್ಮ ಸ್ನೇಹಿತರ ಲಿಸ್ಟು ಮೂಡುವ ತನಕ ಸುಮ್ಮನಿರಿ. ಅದು ಮೂಡಿದ ನಂತರ ಕೆಳಗೆ ಇರುವ ಸ್ಟೇಟಸ್ ಬಾಕ್ಸಿನಲ್ಲಿ “Offline” ಎನ್ನುವುದನ್ನು ಆಯ್ಕೆ ಮಾಡಿರಿ.
11. ನಿಮ್ಮ ಡೆಸ್ಕ್ ಟಾಪಿನಲ್ಲಿ ಜೀಮೈಲ್ ಅನ್ನು ತೆರೆಯಿರಿ. ಆಗ ನಿಮ್ಮ ತಳಮಳ ಮಾಯವಾಗುವುದು. ನೀವು ಪುನಃ ಇನ್ ವಿಸಿಬಲ್ ಮೋಡಿಗೆ ಹೋಗಿರುತ್ತೀರಿ.

ವಿ.ಸೂ. ಒಂದು ವೇಳೆ ಇನ್ನೂ ಆ ಹಳದಿ ಸೂಚನೆಯು ಮಾಯವಾಗದೆ ನೀವು ವಿಸಿಬಲ್ ಮೋಡಿನಲ್ಲಿಯೇ ಇದ್ದರೆ ನೋಟ್ ಪ್ಯಾಡಿನಲ್ಲಿರುವ ಇನ್ನಿತರ ರಿಸೋರ್ಸ್ ಬಳಸಿ ಮೇಲೆ ಹೇಳಿದ ಕ್ರಮಗಳನ್ನು ಪುನರಾವರ್ತಿಸಿ. ನಿಮ್ಮ ಪ್ರಯತ್ನ ಕೈಗೂಡಲೇಬೇಕು.

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

Be First to Comment

Leave a Reply

This site uses Akismet to reduce spam. Learn how your comment data is processed.