Tag: Himalaya

June 15, 2018 / / Articles

ಇಂದು ಮಧ್ಯಾಹ್ನ ಎ.ಎನ್.ಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಒಂದು ಸುದ್ದಿಯನ್ನು ಉಲಿದಿದೆ. ​ಅಧಿಕೃತ ವರದಿಗಳ ಪ್ರಕಾರ ಡೆಹ್ರಾಡೂನ್, ಟೆಹ್ರಿ, ಪೌಡಿ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಸುರಿಯುವ ನಿರೀಕ್ಷೆ ಇದೆ. ಎಂದು. ಈಗ ಅಲ್ಲಿ ಮಳೆ ಬಂದರೂ ಕೂಡ, ಯಾತ್ರಿಕರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸೋಣ. ನೈಸರ್ಗಿಕ ಆಕಸ್ಮಿಕಗಳ ಸಂದರ್ಭಗಳಲ್ಲಿ ಯಾತ್ರಿಕರು ಮೊದಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಲ್ಲಿ ಕೊಟ್ಟಿದೆ. ಯಾತ್ರೆಯ ಇಚ್ಛೆಯುಳ್ಳವರು ಇದನ್ನು ಓದಿಕೊಳ್ಳುವುದು ಉತ್ತಮ.

March 7, 2018 / / Articles

ಜಗತ್ತಿಗೆ ಜ್ಞಾನದ ರುಚಿಯನ್ನು ತೋರಿಸಿದ ಶ್ರೀವೇದವ್ಯಾಸದೇವರು ನೆಲೆಸಿರುವುದು ಹಿಮಾಲಯದ ಉತ್ತರ ಭಾಗದಲ್ಲಿ. ಹಿಮಪರ್ವತಗಳಿಂದ ಸುತ್ತುವರೆದ ಬೆಚ್ಚನೆಯ ತಪ್ಪಲಿನಲ್ಲಿ ಅವರ ಆಶ್ರಮವಿದೆ. ಬದರಿಕಾಶ್ರಮ ಎನ್ನುವುದು ಅವರ ಆಶ್ರಮದ ಹೆಸರು. ಈ ಬದರಿಕಾಶ್ರಮವು ಇರುವ ಪ್ರದೇಶ ಬಹು ರಮಣೀಯವಾಗಿದೆ. ಇದಕ್ಕೆ ಶಮ್ಯಾಪ್ರಾಸವೆನ್ನುವ ಮುದ್ದಾದ ಹೆಸರು ಇದೆ

June 20, 2017 / / Articles

ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ ಈ ಶ್ಲೋಕವು ಸ-ಮಂಜ-ಸವೇ ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.

December 16, 2016 / / Articles
November 6, 2016 / / Articles

ಅಷ್ಟೊಂದು ಸುಂದರವಾದ ಅನುಭವ ಅದು. ಕಣ್ಣಿಗೆ ಏನೇನೂ ಕಾಣದು. ಆದರೆ ಮಳೆಯ ಸದ್ದು ಮಾತ್ರ ನಿಮ್ಮ ಹೃದಯದೊಂದಿಗೆ ಮಾತಿಗಿಳಿದಿರುತ್ತದೆ. ಒಮ್ಮೆಯಾದರೂ ಅನುಭವಿಸಿ ಅದನ್ನು.

September 4, 2016 / / Articles

“ಬಾ ತೋರಿಸು ನಿನ್ನ ಯೋಗ್ಯತೆಯನ್ನು, ನೋಡಿಯೇ ಬಿಡುತ್ತೇನೆ” ಎನ್ನುತ್ತಾ ಏಕಕಾಲದಲ್ಲಿಯೇ ಪೂಜಾಪ್ರಿಯರನ್ನೂ, ಆಧ್ಯಾತ್ಮಜೀವಿಗಳನ್ನೂ, ಬೆಟ್ಟವೇರುವ ಸಾಹಸಿಗಳನ್ನೂ ಕೆಣಕಿ ತನ್ನೆಡೆ ಸೆಳೆಯುವ ಸಾಮರ್ಥ್ಯ ಇರುವ ಪ್ರಾಕೃತಿಕ ನೆಲೆ ಎಂದರೆ ಹಿಮಾಲಯ.

September 17, 2013 / / Articles