ಗುಪ್ತರಾಜರ ಕಾಲವು ಭಾರತದ ಸ್ವರ್ಣಯುಗ ಎಂದೇ ಇಡೀ ಪ್ರಪಂಚವು ಪರಿಗಣಿಸಿದೆ. ಈ ವರಾಹನ ಆರಾಧನೆಯೇ ಇದಕ್ಕೆ ಕಾರಣವಲ್ಲದೆ ಮತ್ತೇನೂ ಅಲ್ಲ.
Tag: history
ಇಂದು ಫೆಬ್ರುವರಿ 25. ಕುಲಪುರೋಹಿತರು ಕಣ್ಮರೆಯಾದ ದಿನ. ಬೇರೆ ಯಾರಾದರೂ ಸ್ಮರಿಸುತ್ತಾರೋ ಇಲ್ಲವೋ. ನಾವಂತೂ ಸ್ಮರಿಸಲೇಬೇಕಾದದ್ದು ಕರ್ತವ್ಯ. ಹಿರಿಯರನ್ನು ಮರೆಯಬಾರದು.
ಅವರ ಮಾತು ಶಾಪ ಮತ್ತು ಅನುಗ್ರಹ ಎರಡೂ ರೀತಿಯಲ್ಲಿ ವರ್ತಿಸಬಲ್ಲದು ಎಂಬ ಅರಿವಿದ್ದ ಅಧಿಕಾರಿಗಳು ಮುಚ್ಚಿದ್ದ ಬಾವಿಯನ್ನು ಎರಡೇ ದಿನಗಳಲ್ಲಿ ತೆಗೆಸಿದರು. ಸುಮಾರು 25 ಅಡಿಗಳಷ್ಟು ಶುದ್ಧವಾದ ನೀರು ಆ ಬಾವಿಯಲ್ಲಿ ಕೆಲವೇ ಗಂಟೆಗಳಲ್ಲಿ ತುಂಬಿಕೊಂಡಿತು.
ಇತಿಹಾಸದ ಅಧ್ಯಯನ ಮಾಡುವವರಿಗೆ ಮಾಧ್ವಸಮೂಹವು ಎರಡು ಅವಳಿಜವಳಿ ದೀಪಗಳನ್ನು ಕೊಡುಗೆಯಾಗಿ ಕೊಟ್ಟಿತ್ತು. ಈ ದೀಪಗಳ ಬೆಳಕಿನಲ್ಲಿ ಅನೇಕ ಮಂದಿ ಆಸಕ್ತರು ಇತಿಹಾಸವನ್ನು ಅಧ್ಯಯನ ಮಾಡಿ ಯಶಸ್ಸನ್ನು ಪಡೆದಿದ್ದಾರೆ. ಈ ಎರಡು ದೀಪಗಳ ಹೆಸರೂ ಶ್ರೀನಿವಾಸ ಎಂದೇ. ಮೊದಲನೆಯ ದೀಪವು ಹಾವನೂರಿನಿಂದ ಎಣ್ಣೆಯನ್ನು ಪಡೆಯುತ್ತಿತ್ತು. ಎರಡನೆಯದ್ದು ಹೊಸರಿತ್ತಿಯಿಂದ. ಮೊದಲನೆಯ ದೀಪವು ಶಾಂತವಾಗಿ ಹಲವು ವರ್ಷಗಳೇ ಕಳೆದಿವೆ. ಈ ದಿನದಂದು ಎರಡನೆಯ ದೀಪವು ಕೂಡ ನಂದಿಹೋಗಿದೆ!