Tag: udupi

July 22, 2024 / / Travelogue

ಶಿವನಿಗೊಂದು ಪುಟ್ಟ ಗುಡಿ, ಅದರ ಸುತ್ತ ಚಿಕ್ಕದೊಂದು ಪ್ರದಕ್ಷಿಣಾಪಥ, ಈ ಪಥದಲ್ಲೊಂದು ಚಿಕ್ಕ ಬಾವಿ. ಪ್ರಧಾನಗುಡಿಯ ಹಿಂಭಾಗದಲ್ಲಿ ವನದುರ್ಗೆಯ ಸನ್ನಿಧಿ, ಮುಂಭಾಗದಲ್ಲಿ ನಾಗಬ್ರಹ್ಮಸ್ಥಾನವು ಇವೆ. ಈ ದೇವತಾಸನ್ನಿಧಿಗಳ ಕಟ್ಟಡಗಳು ಮಾತ್ರವೇ ಇಲ್ಲಿನ ಮಾನವ ನಿರ್ಮಿತಿಗಳು. ಉಳಿದುದೆಲ್ಲವೂ ವನಸಿರಿ ಮಾತ್ರವೇ

June 9, 2024 / / Articles

ಲೋಕದಲ್ಲಿ ಅನೇಕರು ವಿದ್ವಾಂಸರು. ಆದರೆ ಕೆಲವರು ಮಾತ್ರ ವಿನೀತರು. ಜ್ಞಾನಸಾಗರರಾಗಿದ್ದೂ ವಿನಯಶೀಲರಾಗಿರುವವರು ಅಪರೂಪ. ನಮ್ಮ ಗುರುಗಳು ಎಲ್ಲ ರೀತಿಯಿಂದಲೂ ಮೇಲ್ಪಂಕ್ತಿಯಾಗಿದ್ದಾರೆ.

May 27, 2020 / / Articles

ಇಂದು ಗುರುಗಳ ೬೫ನೆಯ ಜನ್ಮನಕ್ಷತ್ರ. ಇವರು ನನಗೆ ರಾಯರೇ ಕೊಟ್ಟಿರುವ ಕರದೀಪ. ಈ ದೀಪದ ಬೆಳಕಿನಲ್ಲಿ ನನ್ನ ಜೀವನ ನಡೆಯುತ್ತಿದೆ. ದೀಪದ ಬೆಳಕು ಇನ್ನೂ ನೂರಾರು ವರ್ಷಗಳ ಕಾಲ ಹಬ್ಬಿಯೇ ಇರಲಿ ಎಂದು ಆಶಿಸುತ್ತಾ ಅದೇ ಬೆಳಕಿನಲ್ಲಿಯೇ ಬರೆದ ಒಂದು ನುಡಿ ನಮನವಿದು. ಅವರ ಅಂತರ್ಯಾಮಿಯಾದ ಶ್ರೀರಾಯರು, ಶ್ರೀಹನುಮ ಮತ್ತು ಶ್ರೀರಾಮನಿಗೆ ಪ್ರಿಯವಾಗಲಿ.

November 19, 2018 / / Articles

ಆದರೆ ಈ ವಿಷಯವನ್ನು ಕುರಿತು ಇನ್ನೂ ಆಳವಾಗಿ ನೋಡಿದರೆ ಶ್ರೀಕೃಷ್ಣನ ನಿಜವಾದ ರಥವೆಂದರೆ ಪ್ರಾಣದೇವರೇ ಆಗಿದ್ದಾರೆ ಎನ್ನುವುದು ನಮಗೆ ತಿಳಿಯುತ್ತದೆ. ಶ್ರೀವಿಷ್ಣುಸಹಸ್ರನಾಮದಲ್ಲಿ ವರದೋ ವಾಯುವಾಹನಃ ಎಂದಿರುವುದು ಇದನ್ನೇ. ವಿಷ್ಣುವು ವಾಯುವಿನ ಮೇಲೆ ಕುಳಿತು ವರಗಳನ್ನು ಕೊಡುವವನು ಎಂದು ಇದರ ಅರ್ಥ. ಈ ಅರ್ಥದಲ್ಲಿ ರಥಾಭಿಮಾನಿದೇವತೆಗಳೂ ಮತ್ತು ರಥವನ್ನು ಎಳೆವ ಅದೃಷ್ಟಶಾಲಿಗಳ ಅಂತರಂಗದಲ್ಲೂ ನಿಂತು ಕಮಲಾನಾಥನನ್ನು ಹೊತ್ತು ತಿರುಗಾಡಿಸುವವರು ಪ್ರಾಣದೇವರೇ ಆಗಿದ್ದಾರೆ. ಸಹಜವಾಗಿಯೇ ಸಂತಸದ ಸರ್ವಶ್ರೇಷ್ಠಾನುಭವವು ದೊರೆಯುವುದು ಮುಖ್ಯಪ್ರಾಣದೇವರಿಗೆ ಮಾತ್ರ. ಉಳಿದವರಿಗೆಲ್ಲ ಆಗುವುದು ಅವರವರ ಯೋಗ್ಯತಾನುಸಾರವಾದ ಆನಂದಾನುಭವ.

August 7, 2017 / / Articles

ಶ್ರೀಕೃಷ್ಣದೇವರ ಪಂಚಾಮೃತಕ್ಕೆ ನರ್ಮದೆಯೇ ಹಾಲುಕೊಡುವವಳು. ದುರ್ದೈವದ ಗಳಿಗೆಯೊಂದರಲ್ಲಿ ಹುಲಿಯೊಂದು ನರ್ಮದೆಯನ್ನು ತಿಂದುಬಿಟ್ಟಿತು. ಇದನ್ನು ತಿಳಿದ ಶ್ರೀರಘುಪ್ರವೀರತೀರ್ಥರ ಹೃದಯವು ತೀವ್ರವಾಗಿ ನೊಂದಿತು. ವ್ಯಥೆಗೊಂಡ ಅವರು ಪದ್ಮಾಸನದಲ್ಲಿ ಕುಳಿತುಬಿಟ್ಟರು. ಮಧ್ಯಾಹ್ನವಾದರೂ ಪೂಜೆಗೆ ಏಳಲಿಲ್ಲ. ಮಠದ ಸಿಬ್ಬಂದಿಗಳು ಚಿಂತಿತರಾದರು. ಇತ್ತ ಮಠದ ಹೊರಗೆ ವಿಲಕ್ಷಣವಾದ ಘಟನೆಯೊಂದು ನಡೆಯಿತು.

November 12, 2016 / / Articles

ರಥಬೀದಿಯನ್ನು ಸುತ್ತುತ್ತಾ… ಉಡುಪಿಗೆ ಬಂದಾಗ ದರ್ಶನ ಬೇಗ ಮುಗಿದು ಊಟ ತಿಂಡಿ ಎಲ್ಲ ಮುಗಿದ ಮೇಲೆ, ಹಾಗೆಯೇ ಒಂದು ಸುತ್ತು…

February 24, 2015 / / Articles

ಹೂವಯ್ಯ ವಿದ್ಯಾವಂತ. ಸ್ನೇಹಜೀವಿ ಮತ್ತು ಭಾವಜಗತ್ತಿನ ವಿಹಾರಿ. ಆತನನ್ನು ತನ್ನ ಯಜಮಾನನ ಸ್ಥಾನದಲ್ಲಿ ನಿಲ್ಲಿಸಿಕೊಂಡಿರುವ ಸೀತೆ ಮುಗ್ಧೆ. ಭಾವುಕಳಾಗಿದ್ದರೂ ತನ್ನ…

August 24, 2013 / / My Works

ಗುರುರಾಯರ ಕೃಪೆಯಿಂದ ಶ್ರೀಕೃಷ್ಣನ ಹುಟ್ಟುಹಬ್ಬದ ಆಹ್ವಾನಪತ್ರಿಕೆಯ ವಿನ್ಯಾಸ ಮಾಡುವ ಅವಕಾಶ ನನಗೆ ದೊರಕಿದ್ದು ನನ್ನ ಅದೃಷ್ಟ. ಪರ್ಯಾಯ ಪೀಠಾಧಿಪತಿಗಳಾದ ಶ್ರೀವಿಶ್ವವಲ್ಲಭತೀರ್ಥರಿಂದ…