ಏಕೆ ಮಮತೆ ಕೊಟ್ಟು ದಣಿಸುವಿ ರಂಗ
ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪಲ್ಲವಿ. ||
ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ –
ಗೆನ್ನನೊಪ್ಪಿಸುವುದು ನೀತವೆ
ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ
ನಿನ್ನ ನೇಮಕೆ ಪ್ರತಿಕೂಲನೆ || 1 ||
ತನುವು ತನ್ನದು ಅಲ್ಲ ತನು ಸ೦ಬ೦ಧಿಗಳೆ೦ಬೋ
ತನುವ್ಯಾರೊ ತಾನ್ಯಾರೊ ಅವರಿಗೆ
ಧನ ಮೊದಲಾದ ವಿಷಯಗಳ ಅನುಭವ
ಹಿ೦ದಿನ ದೇಹದ೦ತಲ್ಲವೆ || 2 ||
ಇ೦ದ್ರಿಯ೦ಗಳು ವಿಷಯದಿ೦ದ ತೆಗಯೆ
ಗೋವಿ೦ದ ಎನ್ನ ವಶಕೆ ಬಾರವೊ
ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ
ಬ೦ಧಕಶಕುತಿಗೆ ನಮೋ ನಮೋ || 3 ||
ಅರಿತು ಅರಿತು ಎನಗರೆಲವವಾದರು
ವಿರಕುತಿ ವಿಷಯದಿ ಬಾರದು
ಕರುಣಾಸಾಗರ ನಿನ್ನ ಮರೆಹೊಕ್ಕಲ್ಲದೆ (ಸ್ಮರಣೆಯೊಂದಲ್ಲದೆ)
ಮರುಳು ನೀಗುವ ಬಗೆಗಾಣೆನೊ || 4 ||
ಎ೦ದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ
ಅ೦ದೆ ಉದ್ಧರಿಸಯ್ಯ ಕರುಣಿಯೆ
ಸು೦ದರ ವಿಗ್ರಹ ಗೋಪಾಲವಿಠಲ ಸುಖ
ಸಾ೦ದ್ರ ಭವಮೋಚಕ ನಮೋ ನಮೋ ||5 ||
ಮಾನ್ಯರೇ,
ಮಾಡಿ ಹಾಡುಗಳ ಲಿಪಿಗಳನ್ನು pdf ಮಾದರಿಯಲ್ಲಿ download ಮಾಡಿಕೊಳ್ಳಲ ಅನುವು ಮಾಡಿಕೊಡಬೇಕೆ೦ದು ಪ್ರಾರ್ಥನೆ.
ಆಗಲಿ. ಖಂಡಿತವಾಗಿಯೂ. ಮಾಡುತ್ತೇನೆ. ಸ್ವಲ್ಪ ಸಮಯ ಅವಕಾಶ ಸಿಗಲಿ 🙂