ಶ್ರೀರಾಯರ ಕೃಪೆಯನ್ನು ಕೊಂಡಾಡದ ಹರಿದಾಸರುಗಳೇ ಇಲ್ಲ. ಶ್ರೀವಿಜಯದಾಸರಾದಿಯಾಗಿ ಎಲ್ಲ ಹರಿದಾಸರೂ ಸಹ ಕನಿಷ್ಠ ಒಂದಾದರೂ ಕೀರ್ತನೆಯನ್ನು ಶ್ರೀಗುರುರಾಜರ ಮೇಲೆ ರಚಿಸಿದ್ದಾರೆ. ಅಂತಹ ದೊಡ್ಡ ಕರುಣೆ ಅವರದು. ಶ್ರೀಗೋಪಾಲದಾಸರು ಶ್ರೀರಾಯರ ಕೃಪಾಛತ್ರದ ನೆರಳಿನ ಖಾತ್ರಿಯ ಬಗ್ಗೆ ಗೋಪಾಲವಿಠಲನ ಮೇಲೆಯೇ ಆಣೆ ಮಾಡಿ ಒಂದು ಕೃತಿಯನ್ನು ರಚಿಸಿದ್ದಾರೆ.
ಎಲ್ಲೋ ಮುಚ್ಚಿಕೊಂಡು ಹೋಗಿ ಈ ಕೃತಿಯು ಅಪರೂಪವಾಗಿಬಿಟ್ಟಿತ್ತು. ಇದನ್ನು ಮೋಹನ ಮತ್ತು ವಾಸಂತಿ ಎರಡೂ ರಾಗಗಳಲ್ಲಿ ಹಾಡಬಹುದು ಎಂದು ಹಾಡಿ ತೋರಿಸಿದ್ದಲ್ಲದೆ, ಹಾಡನ್ನು ಬಾಯಿಪಾಠ ಮಾಡಿಸಿ ಕೃಪೆ ಮಾಡಿದ್ದು ಪ್ರಾತಃ ಸ್ಮರಣೀಯರಾದ ಐಜಿ ಶ್ರೀನಿವಾಸ ಆಚಾರ್ಯರು. ನಮ್ಮ ಪಾಠಶಾಲೆಯಲ್ಲಿ ಮೂರ್ನಾಲ್ಕು ಜನ ಹುಡುಗರು ಇದನ್ನು ಕಲಿತಿದ್ದರು. ಈ ರೀತಿ ಮತ್ತೆ ಇದನ್ನು ಬೆಳಕಿಗೆ ತಂದ ಶ್ರೇಯಸ್ಸು ಅವರಿಗೇನೆ ಸೇರುವುದು.
ಈ ಸುಂದರವಾದ ಕೃತಿಯನ್ನು ಒಂದು ಪಿಡಿಎಫ್ ಮಾಡಿ ಈ ಪೋಸ್ಟಿನ ಕೊನೆಗೆ ಡೌನ್ ಲೋಡ್ ಮಾಡಲು ಕೊಟ್ಟಿದ್ದೇನೆ. ನಿಮಗೆ ಇಚ್ಛೆಯಿದ್ದಲ್ಲಿ ಇದನ್ನು ನೀವು ಪ್ರಿಂಟ್ ಮಾಡಿಸಿ ಚೌಕಟ್ಟನ್ನು ಹಾಕಿಸಿ ಮನೆಯ ಗೋಡೆಗೆ ಶೋಭೆಯನ್ನು ಕೊಡಬಹುದು. 12×8 ಮತ್ತು 12 x 18 ಗಾತ್ರದ ಮುದ್ರಣಕ್ಕೆ ಇದನ್ನು optimize ಮಾಡಿದ್ದೇನೆ. ನಿಮ್ಮ ಗೋಡೆಯ ಅಗತ್ಯಕ್ಕೆ ತಕ್ಕಂತೆ ನೀವು ಇದನ್ನು ಪ್ರಿಂಟ್ ಹಾಕಿಸಿಕೊಳ್ಳಬಹುದು.
ಪ್ರಿಂಟ್ ಮಾಡಿಸಿಕೊಳ್ಳಲು ಬಯಸುವುದಾದರೆ ಕೆಲವು ಅಗತ್ಯ ಸಲಹೆಗಳು
- ಗ್ಲಾಸಿ ಅಥವಾ ಮ್ಯಾಟ್ ಕಾಗದದ ಮೇಲೆ ಕಲರ್ ಲ್ಯಾಬಿನಲ್ಲಿಯೇ ಮುದ್ರಿಸಿಕೊಳ್ಳಿರಿ.
- ಬೆಂಗಳೂರಿನ ಆರ್. ಕೆ. ಕಲರ್ ಲ್ಯಾಬಿನಂತಹ ಜಾಗದಲ್ಲಿ ಮುದ್ರಣ ಮತ್ತು ಚೌಕಟ್ಟು ಎರಡೂ ಒಂದೇ ಕಡೆ ಆಗುತ್ತದೆ. ಮತ್ತು ಬೇಗವೂ ದೊರೆಯುತ್ತದೆ.
- ಫೋಟೋದ ಸುತ್ತ 1 ಇಂಚು ಬಿಳಿ ಜಾಗ ಬಿಟ್ಟು ಆಮೇಲೆ ದಟ್ಟ ಚಾಕಲೇಟು ಬಣ್ಣದ ಫ್ರೇಂ ಹಾಕಿಸಿಕೊಂಡರೆ ಎಲಿಗೆಂಟ್ ಆಗಿ ಕಾಣಿಸುತ್ತದೆ.
- 12×8 ಗಾತ್ರದ್ದು (ಅಂದರೆ A4 ಗಾತ್ರದ್ದು) ಫೋಟೋ ಆದರೆ 1/2 ಇಂಚಿನ ಚೌಕಟ್ಟೂ, 12X18 (A3 ಗಾತ್ರದ್ದು) ಆದರೆ ಮುಕ್ಕಾಲು ಇಂಚಿನ ಚೌಕಟ್ಟನ್ನೂ ಹಾಕಿಸಿಕೊಳ್ಳಿ. ಗಂಭೀರವಾಗಿ, ಚೆನ್ನಾಗಿ ಕಾಣುತ್ತದೆ. ಉಳಿದಂತೆ ನಿಮ್ಮ ಅನುಕೂಲ.
ಡೌನ್ಲೋಡ್ ಲಿಂಕ್
Download your photo here 3.5 MB
ಶ್ರೀಹರಿಃ ಪ್ರಿಯತಾಮ್
Be First to Comment