ಕಪ್ಪುಧರೆಯಿಂದ ಧವಳಗಿರಿಯೆಡೆಗೆ

ನಗಾಧಿರಾಜನೆನಿಸಿದ ಹಿಮಾಲಯದ ಒಡಲಿನಲ್ಲಿ ಅಡಗಿರುವ ಬದರೀನಾಥಧಾಮ ಎನ್ನುವ ಪುಟ್ಟ ಗ್ರಾಮದಲ್ಲಿ ನರ ಹಾಗು ನಾರಾಯಣ ಎನ್ನುವ ಎರಡು ಪರ್ವತಗಳಿವೆ. ಇವೆರಡರ ಮಧ್ಯದಲ್ಲಿ ಅತೀವ ಶೀತಲಳಾದ ಅಲಕನಂದೆಯು ಪರ್ವತವನ್ನೂ ಕೊರೆದುಕೊಂಡುಹೋಗುವ ಭಯಾನಕವೇಗದಲ್ಲಿ ಹರಿಯುತ್ತಾಳೆ. ಈ ನಾರಾಯಣಪರ್ವತದಲ್ಲಿಯೇ ಜಗತ್ಪ್ರಸಿದ್ಧವಾದ ಬದರೀನಾರಾಯಣನ ಸನ್ನಿಧಿ ಇರುವುದು.  ಈ ಗಗನಚುಂಬಿಯಾದ ಪರ್ವತಕ್ಕೆ ಒಂದು ಪೌರಾಣಿಕ ಮಹತ್ವವಿದೆ. ಈ ಬೆಟ್ಟದ ಮೇಲೆ ಕುಳಿತು ಮಾಡಿದ ಒಂದು ಜಪಕ್ಕೆ ಸಾವಿರ ಜಪಮಾಡುವುದರ ಫಲ ದೊರಕುವುದು. ಉದಾಹರಣೆ : ಇಲ್ಲಿ ೧೦೦೦ಬಾರಿ ಬಾರಿ “ಶ್ರೀಕೃಷ್ಣಾಯನಮಃ” ಎಂದು ಜಪಿಸಿದರೆ ೧೦೦೦೦ ಜಪದ ಫಲವು ದೊರಕುವುದು. ಶ್ರೀನಾರಾಯಣನ ಅವಾಸವು ಇಲ್ಲಿರುವುದರಿಂದಲೇ ಈ ಪರ್ವತಕ್ಕೆ ಇಂತಹ ಮಹತ್ವ ಬಂದಿರಲಿಕ್ಕೂ ಸಾಕು.  ಬಂದಿರುವ ಅನೇಕ ಯಾತ್ರಿಕರೂ ಇಲ್ಲಿ ಒಂದಲ್ಲ ಒಂದು ಮಂತ್ರದ ಜಪದಲ್ಲಿ ಮಗ್ನರಾಗಿರುವುದನ್ನು ನಾವು ಕಾಣಬಹುದು.

ಇಲ್ಲಿರುವ ಅಧಿಕೃತ ದೇವಸ್ಥಾನವೆಂದರೆ ಅದು ಶ್ರೀಬದರೀನಾರಾಯಣನ ಸನ್ನಿಧಿಯೊಂದೇ! ಇದರ ಹೊರತಾಗಿ ಇರುವುದೆಲ್ಲ ಒತ್ತೊತ್ತಾಗಿ ಕಟ್ಟಿರುವ ಮನೆಗಳು ಅಥವಾ ಮಿರಿಮಿರಿ ಮಿಂಚುವ ಅಂಗಡಿಗಳು.

ನೀವು ದೇವಳಕ್ಕೆ ಮುಖಮಾಡಿ ನಿಂತರೆ ನಿಮ್ಮ ಬಲಕ್ಕೆ ಒಂದು ಸಂದಿಯಂತಹ ದಾರಿ ಸಿಗುವುದು. (ಇಂದು ಒಂದು ಕಾಲದ ರಾಜಮಾರ್ಗ!) ಇದು ಇಲ್ಲಿನ ಪ್ರಸಿದ್ಧಸ್ಥಳವಾದ ಬ್ರಹ್ಮಕಪಾಲಕ್ಕೆ ಹಾಗೆಯೆ ಅಲ್ಲಿಂದ ಮುಂದೆ ಭಾರತದ ಕೊನೆಯ ಹಳ್ಳಿಯಾದ ಮಾನಾ ಎನ್ನುವಲ್ಲಿಗೆ ಕರೆದುಕೊಂಡು ಹೋಗುವುದು.  ಇದೇ ದಾರಿಯಲ್ಲಿ ಹಾಗೆಯೇ ನಿಮ್ಮ ಎಡಗಡೆ ಬರುವ ಮಾಸಲುಬಣ್ಣದ  ನಾಲ್ಕಾರು ಆಶ್ರಮಗಳನ್ನು ನೋಡುತ್ತ, ನಾಲ್ಕಾರು ಹೆಜ್ಜೆ ನಡೆದರೆ ನಿಮ್ಮ ಹೆಜ್ಜೆಗಳು ಗಕ್ಕನೆ ನಿಲ್ಲುತ್ತವೆ. ಯಾಕೆಂದರೆ ಐದನೆಯ ಪುಟ್ಟ ಹಳೆಯ ಕಟ್ಟಡದ ಮೇಲೆ “ಶ್ರೀರಾಘವೇಂದ್ರಸ್ವಾಮಿಗಳವರ ಮಠ” ಎನ್ನುವ ಬೋರ್ಡು ನೇತಾಡುತ್ತಿರುತ್ತದೆ! (ಈ ಲೇಖನವನ್ನು ಓದುವ ಎಲ್ಲರೂ ರಾಯರ ಭಕ್ತರೆಂದೇ ನಾನು ಭಾವಿಸಿ ನಿಮ್ಮ ಹೆಜ್ಜೆಗಳು ನಿಲ್ಲುತ್ತವೆ ಎಂದು ಹೇಳುತ್ತಿದ್ದೇನೆ. ). ಹಿಂದೀ, ಗಢವಾಲೀ, ನೇಪಾಲೀ ಭಾಷೆಯಗಳು ಗಿಜಿಗಿಜಿಯ ಮಧ್ಯ ನಮ್ಮ ರಾಯರ ಹೆಸರನ್ನು ನೋಡಿದರೆ ಸಂತಸಭರಿತ ಆಶ್ಚರ್ಯವಾಗದೆ ಇನ್ನೇನು?

ಕಪ್ಪುಮಣ್ಣಿನ ನೆಲ ಎಂದೇ ಖ್ಯಾತವಾದ ಬಾಗಿಲಕೋಟೆಯ ಪ್ರಾಂತ್ಯದ ಸಾಧಕರು ಪರ್ವತೀಕರ ಮಹಾರಾಜರು. ಪರಮಭಕ್ತರಾದ ಇವರನ್ನು ಹಿಂಬಾಲಿಸಿ ಇಲ್ಲಿ ಶ್ರೀರಾಯರು ಬಂದು ನೆಲೆಸಿದ್ದಾರೆ.  ಅದೊಂದು ಅತಿ ರೋಮಾಂಚಕ ವೃತ್ತಾಂತ.

ಶ್ರೀರಾಯರ ೩೪೧ ಆರಾಧನೆಯ ಸಂದರ್ಭದಲ್ಲಿ ಪ್ರಜಾವಾಣಿಯ ವಿಶೇಷ ಪುರವಣಿಗೆಂದು ಈ ವಿಸ್ತಾರವಾದ ಲೇಖನವನ್ನು ಬರೆದಿದ್ದೆ. ಅವರ ಅಗತ್ಯಕ್ಕೆ ತಕ್ಕಂತೆ ಲೇಖನವನ್ನು ಚೊಕ್ಕವಾಗಿ ಕತ್ತರಿಸಿ ಮುದ್ರಿಸಿದ್ದರು. ಸುಮಾರು ಎಂಟು ಪುಟಗಳ ಲೇಖನ ಇದು. ಇಲ್ಲಿಯೇ ಬರೆದರೆ ಓದಲು ಆಗಲಿಕ್ಕಿಲ್ಲವೆಂದು ಅದರ ಪೋರ್ಟೆಬಲ್ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದ್ದೇನೆ. ಓದಿ ಸಂತಸಪಡುತ್ತೀರೆಂದು ನನ್ನ ನಂಬಿಕೆ. ನಿಮ್ಮ ಅನಿಸಿಕೆಗಳನ್ನು ತಪ್ಪದೇ ತಿಳಿಸಿ.

ಸಂಪೂರ್ಣ ಲೇಖನವನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿರಿ. : Download

ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

More Posts

ರಘು Written by:

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

5 Comments

  1. Raghu Bisalahalli
    September 20, 2013
    Reply

    Hi Raghunandan,
    Very Nicely Written Article….
    Thanks a lot for the information.

    ||Om Sri Raghavendraya Namaha ||

    • rns
      September 20, 2013
      Reply

      Thank you Raghu.

  2. Raghavendra Prasad
    September 20, 2013
    Reply

    Indiranagar (Bangalore) Raghavendra swamy mutt is run by a trust created in memory of Shri Parvathikar.

    The trust is called Shri Raghavendra swamy mission.

    The unique mutt has both Shri Raghavendra and Vadeendratheertha mrithika vrindavana in the same sannidhi.

    • rns
      September 21, 2013
      Reply

      Raghavendra, thanks for the comment. Was that trust established in His memory or He Himself has established it ? Pls clarify.

      Btw Swamiji has consecrated Sri Vadeendra Teertha’s Mrittika Vrindavana with Sri Rayaru at Malkaj Giri, New Delhi & Mahaboob Nagar (?) also.

      • Raghavendra Prasad
        September 22, 2013
        Reply

        I think it was created by him, however I am not sure. I was introduced to his daughter and son-in-law during MadhwaNavami celebrations (2013) at IndiraNagar rayar mutt. It was then that I came to know about Shri Parvatikar.

        Thanks for the info about the other locations, I was unaware of those. Great work on propagating information about Shri Parvatikar!

Leave a Reply

This site uses Akismet to reduce spam. Learn how your comment data is processed.