ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು
ಕಾಯ ನಿರ್ಮಲಿನಕಾರಣವಾಹುದೊ
ಮಾಯಾ ಹಿಂದಾಗುವದು ನಾನಾ ರೋಗದ ಬೀಜ
ಬೇಯಿಸಿ ಕಳೆವದು ವೇಗದಿಂದ
ನಾಯಿ ಮೊದಲಾದ ಕುತ್ಸಿತ ದೇಹ ನಿ
ಕಾಯವ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲಿ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯ! ರಾಜೌಷಧಿ ನಿಯಾಮಕ ಕರ್ತ!
ಶ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಲಿಪ
ಧ್ಯೇಯ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ
ಸಂನ್ಯಾಯವಂತನಾಗಿ ಚೇಷ್ಟೆ ಮಾಳ್ಪ
ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯ!
ಪ್ರಿಯನೋ ಕಾಣೋ ನಮಗೆ ಅನಾದಿ ರೋಗ ಕಳೆವ || ೧ ||
आयुवृद्धियागोदु श्रेयस्सु बरुवुदु
काया निर्मलिना कारणवाहदॊ
माया हिंदागुवदु नाना रोगद बीज
बेयिसि कळॆवदु वेगदिंद
नायि मॊदलाद कुत्सित देह नि
कायव तॆत्तु दुष्कर्मदिंद
क्रीयमाण संचित भरितवागिद्द दुःख
हेय सागरदॊळु बिद्दु बळलि
नोयिसिकॊंडु नॆलॆगाणदॆ ऒम्मॆ तन्न
बायलि वैद्यमूर्ति श्रीधन्वंत्रि
राय! राजौषधि नियामक कर्त!
श्रीयरसनॆंदु तुतिसलागि
तायि ऒदगि बंदु बालन्न साकिदंतॆ
नोयगॊडदॆ नम्मन्नु पालिप
ध्येया देवादिगळिगॆ धर्मज्ञ गुणसांद्र
श्रेयस्सु कॊडुवनु भजकरिगॆ
माया मंत्रदिंद जगवॆल्ल व्यापिसि
(स)न्यायवंतनागि चेष्टॆ माळ्पा
वायुवंदित नित्य विजय विट्ठलरेया
प्रियनु काणो नमगॆ अनादि रोग कळॆवा ॥ १ ॥
Be First to Comment