ಗುರುರಾಯರ ಕೃಪೆಯಿಂದ ಶ್ರೀಕೃಷ್ಣನ ಹುಟ್ಟುಹಬ್ಬದ ಆಹ್ವಾನಪತ್ರಿಕೆಯ ವಿನ್ಯಾಸ ಮಾಡುವ ಅವಕಾಶ ನನಗೆ ದೊರಕಿದ್ದು ನನ್ನ ಅದೃಷ್ಟ. ಪರ್ಯಾಯ ಪೀಠಾಧಿಪತಿಗಳಾದ ಶ್ರೀವಿಶ್ವವಲ್ಲಭತೀರ್ಥರಿಂದ ಇದರ ಬಗ್ಗೆ ಸೂಚನೆ ದೊರೆತು ಸಾಕಷ್ಟು ಸಮಯವೇ ಆಗಿದ್ದರೂ ಏನೇನೋ ಸಬೂಬು ಹೇಳಿ ಕೆಲಸವನ್ನು ಮುಂದೂಡಿ ಅವರಿಗೊಂದಿಷ್ಟು ಟೆನ್ಷನ್ ಮಾಡಿದ್ದಾಯ್ತು. ಆದರೂ ಅವರು ನನ್ನ ತಪ್ಪನ್ನು ಗಮನಿಸದೆ ಶ್ರೀವಾದಿರಾಜರಲ್ಲಿ ಮಾಡಿದ ಪ್ರಾರ್ಥನೆಯ ಬಲದಿಂದ ಉತ್ತಮ ಎನ್ನಬಹುದಾದ ಆಹ್ವಾನಪತ್ರಿಕೆಯೊಂದು ಮೂಡಿ ಬಂದಿತು. ಈ ಪತ್ರಿಕೆಯ ಸೌಂದರ್ಯಕ್ಕೆ ಮೂಲಕಾರಣ ನನ್ನ ಕೆಲಸವೇನಲ್ಲ. ಅದಕ್ಕೆ ಕಾರಣೀಭೂತರು ಈ ಕೆಳಗಿನವರು.
- ಜಗದೊಡೆಯನೇ ಆದರೂ ಕದ್ದ ಬೆಣ್ಣೆಯನ್ನು ಮೆಲ್ಲುತ್ತಿರುವ ಕೃಷ್ಣಯ್ಯ!
- ತಮ್ಮ ಪೂಜಾಮಗ್ನ ಚಿತ್ರವನ್ನು ಒದಗಿಸಿದ ಶ್ರೀಪಾದಂಗಳವರು
- ಆನಂದವೆನಿಸುವ ಭಾವವನ್ನು ಚಿತ್ರದಲ್ಲಿ ಸೆರೆಹಿಡಿದ ಸುಕುಮಾರ ಕೊಡವೂರು (ಸೋದೆ ಪರ್ಯಾಯದ ಫೋಟೊಗಳು ಇವರದ್ದೇ ಕೈಚಳಕ)
- ಪ್ರಿಂಟು ಒಂದಿಷ್ಟು ಚಾಲೆಂಜಿಂಗ್ ಆಗಿದ್ದರೂ ಅತಿ ಕಡಿಮೆ ಸಮಯಲ್ಲಿ ಸೂಕ್ಷ್ಮವಾದ ಎಂಬೋಸಿಂಗ್ ಮಾಡಿ ಇನ್ವಿಟಶನ್ನಿಗೆ ಕಳೆತಂದಿತ್ತ ಉಡುಪಿಯ ಮಧುಬನ್ ಗ್ರಾಫಿಕ್ಸ್ ನ ಮಾಲಿಕರು.
ಕೊನೆಯ ಫಲಿತಾಂಶ ಬಂದಿದ್ದು ಈ ರೀತಿ!
Be First to Comment