Author: ರಘು

ಕಾಮಧೇನುವಿನ ಪೀಳಿಗೆಯ ಹಸುವಿನ ನೆರಳನ್ನು ಆಶ್ರಯಿಸಿ ಜೀವಿಸುತ್ತಿರುವವನು.

July 28, 2023 / / Articles

ಶುಭಕಾರ್ಯಗಳಲ್ಲಿ ರಕ್ತವರ್ಣ / ಹಳದಿ / ಕುಂಕುಮವರ್ಣದ ಮಂತ್ರಾಕ್ಷತೆಯನ್ನು ಮಾತ್ರವೇ ವಧೂವರರ ಅಥವಾ ವಟುವಿನ ಮೇಲೆ ಹಾಕಬೇಕೇ ಹೊರತು ನೀಲಿ, ಹಸಿರು, ಬಿಳಿ ಹೀಗೆ ಬಗೆ ಬಗೆಯ ವರ್ಣದ ಅಕ್ಷತೆಗಳನ್ನು ಸುರಿಯಬಾರದು. ಇತ್ತೀಚಿನ ಹುಚ್ಚು ಆಗಿರುವ ಥರ್ಮಾಕೋಲಿನ ಗುಂಡುಗಳು, ಢಬ್ ಎಂದು ಸಿಡಿಯುವ ಬಣ್ಣ ಬಣ್ಣದ ಕಾಗದಗಳನ್ನೂ ಬಳಸಲೇ ಬಾರದು.

July 21, 2023 / / ಇತಿಹಾಸ

ಈ ವೈದ್ಯ ಮನೆತನದಲ್ಲಿ “ವಿಠೋಬಾಚಾರ್ಯ” ಎಂಬ ಆಧ್ಯಾತ್ಮಜೀವಿಯ ಹುಟ್ಟು ಆಯಿತು. ದೊಡ್ಡ ಪ್ರತಿಭಾಶಾಲಿಯಾದವರು ಇವರು. ಮನೆತನದ ವೃತ್ತಿಯಾದ ಆಯುರ್ವೇದದೊಂದಿಗೆ ಕನ್ನಡ, ಸಂಸ್ಕೃತ, ಆಂಗ್ಲಭಾಷೆ, ಆಗಿನ ಸರ್ಕಾರಿ ಭಾಷೆಯಾದ ಪರ್ಶಿಯನ್ ಭಾಷೆಗಳಲ್ಲಿ ಇವರಿಗೆ ಒಳ್ಳೆಯ ಪಾಂಡಿತ್ಯವಿತ್ತು. ಆಶುಕವಿಗಳಿವರು. ಜೊತೆಗೆ ಒಳ್ಳೆಯ ಗಣಿತಜ್ಞರು ಕೂಡಾ.

July 20, 2023 / / ಇತಿಹಾಸ

ಶ್ರೀವ್ಯಾಸರಾಜರ ಮೂಲಕ, ಶ್ರೀಹನುಮನ ಮೂಲಕ ಶ್ರೀಕೃಷ್ಣಮೇಘನ ಒಲವು ನಮ್ಮತ್ತಲೂ ಹರಿದು ಬರಲಿ ಎಂಬಂತೆ ನಮ್ಮ ನಡತೆಯನ್ನು ನಾವೆಲ್ಲ ಇರಿಸಿಕೊಳ್ಳೋಣ.

July 19, 2023 / / Kshetragalu

ಇತರರ ಆಚಾರ ವಿಚಾರಗಳಿಗೆ ನಮ್ಮಿಂದ ರಗಳೆಯಾಗದಂತೆ ನಾವು ನಡೆದುಕೊಳ್ಳುವುದು ಇಂದಿನ ಕಾಲದ ಅಗತ್ಯತೆಗಳಲ್ಲಿ ಒಂದು. ಆದರೆ ಹೀಗಿರುವ ಪ್ರಯತ್ನದಲ್ಲಿ ನಮ್ಮ ಸಿದ್ಧಾಂತದಿಂದ ನಾವೂ ಹಳಿತಪ್ಪದಂತೆ ಇರಲು ಶ್ರೀವಾದಿರಾಜ ಪ್ರಭುಗಳ ಇಂತಹ ಯುಕ್ತಿಭರಿತವಾದ ನಿರ್ದೇಶನಗಳು ಅತ್ಯಗತ್ಯ. ಅವರ ಈ ದೀಪವು ನಮಗೆ ಎಂದೆಂದೂ ದಾರಿ ತೋರುತ್ತಿರಲಿ ಎಂದು ಪ್ರಾರ್ಥಿಸೋಣ.

July 18, 2023 / / Kshetragalu

ಈ ತುಂಗಭದ್ರೆಯೇ ನಮ್ಮ ಕನ್ನಡನಾಡಿನ ಎರಡು ಸಾಂಸ್ಕೃತಿಕ ವಲಯಗಳನ್ನು ಪ್ರತ್ಯೇಕಿಸುವ ಭೌಗೋಳಿಕೆ ಎಲ್ಲೆಯಾಗಿದೆ. ಉತ್ತರವಾಹಿನಿಯ ಎಡಕ್ಕಿರುವುದೆಲ್ಲ ಹೊಳೆಯಾಚೆಯ ಸೀಮೆ, ಬಲಕ್ಕಿರುವುದೂ ಹೊಳೆಯಾಚೆಯೆ ಸೀಮೆಯೇ! ಎಡಗಡೆಯದ್ದು ಧಾರವಾಡದ ಸೀಮೆ, ಬಲಗಡೆಯದ್ದು ಮೈಸೂರು ಸೀಮೆ.

July 3, 2023 / / Articles

ಗುರುಗಳ ಕರುಣೆಯು ಎನಗಾಯಿತಿಂದು. ಶ್ರೀವ್ಯಾಸಪೂರ್ಣಿಮೆಯ ದಿನ. ಎಲ್ಲೆಡೆ ಗುರುಪೂರ್ಣಿಮೆಯೆಂದೇ ಪ್ರಸಿದ್ಧ. ಹೌದು. ಜಗತ್ತಿಗೇ ಯಾವತ್ತೂ ಗುರುವಾದ ಶ್ರೀವೇದವ್ಯಾಸರ ಹೆಸರಿನ ಪೂರ್ಣಿಮೆಯಿದು.…

June 29, 2023 / / Articles

“ಬರೆದಿಟ್ಟಂತೆ ಜೀವನ ಮಾಡಲು ಸಾಧ್ಯವಿಲ್ಲ ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ” ಎಂಬುದು ಒಂದು ಸುಭಾಷಿತ. ಇದು ಸುಭಾಷಿತವೋ ಅಥವಾ ಯಾರೋ ಒಬ್ಬ ಅನುಭಾವಿಯ ಮಾತೋ ನನಗೆ ತಿಳಿಯದು. ಆದರೆ ಸೂಕ್ತಿಯ ಮೊದಲಾರ್ಧಕ್ಕೆ ನಮ್ಮ ಶ್ರೀಗಳವರು ಒಂದು ಸವಾಲು ಎನಿಸಿದ್ದಾರೆ. ಶಾಸ್ತ್ರಗಳು ಬರೆದಿಟ್ಟಂತೆಯೇ ಅವರ ಜೀವನವಿದೆ, ಅವರ ಜೀವನವು ನಮಗೆಲ್ಲ ಬರೆದಿಟ್ಟುಕೊಳ್ಳಲೇಬೇಕಾದ ಮಹಿಮೆಗಳಿಂದ ಕೂಡಿದೆ.

June 2, 2023 / / Quotes

ಹುಲ್ಲಿಗಾಸೆ ಪಡುವ ಗೂಳಿಯನ್ನು ತಡೆಯಲು ಅಸಾಧ್ಯ. ಪರಪುರುಷನ ಬಯಕೆಯಿರುವ ಹೆಂಗಸನ್ನು ಸರಿಪಡಿಸುವುದು ಅಸಾಧ್ಯ. ಅದೇ ರೀತಿ ಜೂಜಿಗೆ ಮನಸೋತವನನ್ನು ಸರಿಪಡಿಸುವುದು ಸಹ ಅಸಾಧ್ಯ

November 28, 2022 / / ಇತಿಹಾಸ

ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದರ ಮೂಲಕ, ಆ ಒಂದು ಮನೆಯನ್ನು ಇತ್ತೀಚೆಗೆ ಶ್ರೀರಾಯರ ಅಂತರ್ಯಾಮಿ ಶ್ರೀಮುಖ್ಯಪ್ರಾಣ-ಶ್ರೀಪರಮಮುಖ್ಯಪ್ರಾಣದೇವರಿಗೆ ಸಮರ್ಪಣೆ ಮಾಡಿದ್ದಾರೆ. ದೇಸಾಯರ ವಂಶವು ಚೆನ್ನಾಗಿ ಬೆಳಗಲಿ. ರಾಯರ ಮನೆಯು ರಾಯರಿಗೇನೇ ಸೇರಿತು. ಈ ಸೇರಿಸುವಿಕೆಯ ಕೀರ್ತಿಯು ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೇನೆ ಸೇರಿತು.

November 26, 2022 / / You Shoud know

ಶ್ರೀರಾಘವೇಂದ್ರತೀರ್ಥ ಮಹಾಪ್ರಭುಗಳು ಕೂಡಾ, ತಮ್ಮ ಪೂರ್ವಾಶ್ರಮದಲ್ಲಿ ಶ್ರೀರಾಮಚಂದ್ರತೀರ್ಥರಲ್ಲಿ ವಿದ್ಯಾರ್ಜನೆಯನ್ನು ಮಾಡಿದ್ದಾರೆಂದು ಹಿರಿಯರ ಮಾತಿದೆ. ಎಂತಹ ಆದರ್ಶವಾದ ನಡುವಳಿಕೆಯಲ್ಲವೇ ಇದೆಲ್ಲ. ಶ್ರೀವ್ಯಾಸರಾಜರು ತಮ್ಮ ಶಿಷ್ಯರನ್ನು ಶ್ರೀಸುರೇಂದ್ರರಿಗೆ ಕೊಟ್ಟರು, ಹಾಗೆ ಕೊಟ್ಟ ವಿಜಯೀಂದ್ರರಲ್ಲಿ ಶ್ರೀರಾಮಚಂದ್ರತೀರ್ಥರು ಪಾಠ ಹೇಳಿಸಿಕೊಂಡರು, ಶ್ರೀರಾಮಚಂದ್ರತೀರ್ಥರಲ್ಲಿ ಶ್ರೀರಾಯರು ಪಾಠ ಹೇಳಿಸಿಕೊಂಡಿದ್ದಾರೆ! ಇಂತಹ ಒಂದು ಅಪೂರ್ವವಾದ ಬಾಂಧವ್ಯ ಇಂದಿಗೂ ಮುಂದುವರೆಯಲಿ ಎಂಬುದು ನನ್ನ ಹೆಬ್ಬಯಕೆ.