Category: Articles

March 8, 2018 / / Articles

ಆದರೆ ಹುಲಿಯ ವಿಷಯ ಹಾಗಲ್ಲ! ಅದರ ಶಕ್ತಿಯು ಅಪಾರ. ಆದರೂ ಅದು ಸಂಕೋಚದ ಜೀವಿ. ದಟ್ಟ ಕಾಡಿನ ಮಧ್ಯವೇ ಅದರ ವಾಸ. ಅತ್ಯಗತ್ಯವಿಲ್ಲದೆ ಅದು ಇತರರೆಡೆ ಬಾರದು. ಸಿಂಹದಂತೆ ತನ್ನ ಗುಂಪಿನ ಇನ್ನಿತರ ಮೇಲೆ ಆಹಾರಕ್ಕಾಗಿ ಅವಲಂಬನೆಯನ್ನೂ ಅದು ಮಾಡದು. ಕೋಪ ಬಂತೆಂದು ಸಲಗನಂತೆ ಬಂಡಾಯದ ವಿಧ್ವಂಸಕಾರ್ಯವನ್ನೂ ಮಾಡದು. ಕೆಲಸ ಮುಗಿದ ನಂತರ ಮತ್ತೆ ತನ್ನ ವಾಸಸ್ಥಾನವನ್ನು ಸದ್ದಿಲ್ಲದಂತೆ ಸೇರಿಕೊಂಡು ಬಿಡುವುದು. ವಿನಾಕಾರಣ ಬೇರಯವರ ಮೇಲೆ ಎಂದೂ ಎರಗದು! ಆದರೆ ಅದರ ಎಲ್ಲೆಯನ್ನು ಪ್ರಶ್ನಿಸಿದಿರೋ! ಮುಂದಿನದನ್ನು ಓದಲು ನೀವು ಇರುವುದೇ ಇಲ್ಲ!

March 7, 2018 / / Articles

ಜಗತ್ತಿಗೆ ಜ್ಞಾನದ ರುಚಿಯನ್ನು ತೋರಿಸಿದ ಶ್ರೀವೇದವ್ಯಾಸದೇವರು ನೆಲೆಸಿರುವುದು ಹಿಮಾಲಯದ ಉತ್ತರ ಭಾಗದಲ್ಲಿ. ಹಿಮಪರ್ವತಗಳಿಂದ ಸುತ್ತುವರೆದ ಬೆಚ್ಚನೆಯ ತಪ್ಪಲಿನಲ್ಲಿ ಅವರ ಆಶ್ರಮವಿದೆ. ಬದರಿಕಾಶ್ರಮ ಎನ್ನುವುದು ಅವರ ಆಶ್ರಮದ ಹೆಸರು. ಈ ಬದರಿಕಾಶ್ರಮವು ಇರುವ ಪ್ರದೇಶ ಬಹು ರಮಣೀಯವಾಗಿದೆ. ಇದಕ್ಕೆ ಶಮ್ಯಾಪ್ರಾಸವೆನ್ನುವ ಮುದ್ದಾದ ಹೆಸರು ಇದೆ

August 7, 2017 / / Articles

ಶ್ರೀಕೃಷ್ಣದೇವರ ಪಂಚಾಮೃತಕ್ಕೆ ನರ್ಮದೆಯೇ ಹಾಲುಕೊಡುವವಳು. ದುರ್ದೈವದ ಗಳಿಗೆಯೊಂದರಲ್ಲಿ ಹುಲಿಯೊಂದು ನರ್ಮದೆಯನ್ನು ತಿಂದುಬಿಟ್ಟಿತು. ಇದನ್ನು ತಿಳಿದ ಶ್ರೀರಘುಪ್ರವೀರತೀರ್ಥರ ಹೃದಯವು ತೀವ್ರವಾಗಿ ನೊಂದಿತು. ವ್ಯಥೆಗೊಂಡ ಅವರು ಪದ್ಮಾಸನದಲ್ಲಿ ಕುಳಿತುಬಿಟ್ಟರು. ಮಧ್ಯಾಹ್ನವಾದರೂ ಪೂಜೆಗೆ ಏಳಲಿಲ್ಲ. ಮಠದ ಸಿಬ್ಬಂದಿಗಳು ಚಿಂತಿತರಾದರು. ಇತ್ತ ಮಠದ ಹೊರಗೆ ವಿಲಕ್ಷಣವಾದ ಘಟನೆಯೊಂದು ನಡೆಯಿತು.

June 20, 2017 / / Articles

ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ ಈ ಶ್ಲೋಕವು ಸ-ಮಂಜ-ಸವೇ ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.

April 22, 2017 / / Articles

ಆದರೆ ವೈದಿಕಾಚಾರ್ಯರ ಪ್ರತಿಮೆಯೊಂದು ಸಾರ್ವಜನಿಕರ ಲ್ಯಾಂಡ್ ಮಾರ್ಕ್ ಆದಲ್ಲಿ ಅದು ನಮಗೊಂದು ಹೆಮ್ಮೆಯ ಸಂಕೇತ ಎನಿಸಬೇಕಲ್ಲವೆ? ವಿರಳವಾದರೂ ಪರವಾಗಿಲ್ಲ ಉತ್ತಮವಾಗಿದ್ದರೆ ಸಾಕು, ಒಟ್ಟಿನಲ್ಲಿ ವೇದಾಂತಾಗಸದ ನಕ್ಷತ್ರಕ್ಕೊಂದು ವೇದಿಕೆ ಬೇಕೇ ಬೇಕು. ಎಲ್ಲರಿಗೂ ಅವರ ಮಹತ್ವ ತಿಳಿಯಬೇಕು.

February 6, 2017 / / Articles

“ಚೆನ್ನಾಗಿ” ಬದುಕಬೇಕೆಂಬ ಇಚ್ಛೆ ಎಷ್ಟು ಜನಕ್ಕಿರುವುದೋ ಏನೋ ಗೊತ್ತಿಲ್ಲ. ಆದರೆ ಬದುಕಲೇಬೇಕೆನ್ನುವ ಇಚ್ಛೆಯಂತೂ ಎಲ್ಲರಿಗೂ  ಚೆನ್ನಾಗಿಯೇ ಇರುವುದು.  ದೇವರೇನೋ ಬದುಕಬೇಕೆನ್ನುವ…

December 16, 2016 / / Articles
November 22, 2016 / / Articles

ತನ್ನ ಹಿಂದೆ ಬಂದವರು ಬೇರಾರೋ ಅಲ್ಲ ತನ್ನ ಯಜಮಾನನೇ ಆದ ಸೂರ್ಯ ಎಂದು ಸಂಜ್ಞೆಗೆ ಅರ್ಥವಾಗಲು ತಡವಾಗಲಿಲ್ಲ. ಮಹಾಜ್ವಾಲಾಮಯವಾದ ಶರೀರವನ್ನು ತನಗಾಗಿಯೇ ತಂಪುಗೊಳಿಸಿಕೊಂಡು ಬಂದ ಇನಿಯನ ಮೇಲೆ ಸಂಜ್ಞೆಗೆ ಪ್ರೇಮ ತುಂಬಿ ಹರಿಯಿತು. ಅನೇಕ ವರ್ಷಗಳ ಕಾಲ ಅಶ್ವರೂಪದಲ್ಲಿಯೇ ಸಂಸಾರವನ್ನು ನಡೆಸಿದರು.

November 12, 2016 / / Articles

ರಥಬೀದಿಯನ್ನು ಸುತ್ತುತ್ತಾ… ಉಡುಪಿಗೆ ಬಂದಾಗ ದರ್ಶನ ಬೇಗ ಮುಗಿದು ಊಟ ತಿಂಡಿ ಎಲ್ಲ ಮುಗಿದ ಮೇಲೆ, ಹಾಗೆಯೇ ಒಂದು ಸುತ್ತು…

November 6, 2016 / / Articles

ಅಷ್ಟೊಂದು ಸುಂದರವಾದ ಅನುಭವ ಅದು. ಕಣ್ಣಿಗೆ ಏನೇನೂ ಕಾಣದು. ಆದರೆ ಮಳೆಯ ಸದ್ದು ಮಾತ್ರ ನಿಮ್ಮ ಹೃದಯದೊಂದಿಗೆ ಮಾತಿಗಿಳಿದಿರುತ್ತದೆ. ಒಮ್ಮೆಯಾದರೂ ಅನುಭವಿಸಿ ಅದನ್ನು.