ಇಷ್ಟೆಲ್ಲಾ ವ್ಯವಹಾರ ನಡೆಯುವ ಈ ನಗರದ ಹಿಂದೆ ಯಾವ ಮನೆಮುರುಕರ ತಂತ್ರಗಾರಿಕೆಯೂ ಇಲ್ಲ. ಇಲ್ಲಿ ಉಸಿರಾಡುವ ಯಾವ ಜೀವಿಯೂ ಆಧುನಿಕ ಎಂಬಿಯೇ ಮತ್ತಿತರ ಹಣಮಾಡುವ ಡಿಗ್ರಿಯನ್ನು ಪಡೆದಿಲ್ಲ. ಯಾವ ಗಂಡಸೂ ಟೈ ಹಾಕಿಕೊಂಡಿಲ್ಲ, ಯಾವ ಹುಡುಗಿಯೂ ಲೋಗೋ ಇರುವ, ಮೈ ಬಿಗಿವ ಬಟ್ಟೆಯನ್ನು ಧರಿಸಿಲ್ಲ! ಯಾರ ಮುಖವೂ ಅಸಹಜವಾದ ಪೌಡರು, ತುಟಿರಂಗುಗಳನ್ನು ಬಳಿದುಕೊಂಡಿಲ್ಲ! ಯಾರ ಮುಖವನ್ನು ನೋಡಿದರೂ ಅದು ಕಷ್ಟವನ್ನು ಎತ್ತಿ ತೋರಿಸುವ ಬೆವರಿನಿಂದಲೇ ಕೂಡಿದೆ! ವಿನಯಭರಿತವಾಗಿಯೇ ಗಂಟಲಿಗೆ ಗಾಳ ಹಾಕುವ ಸೃಗಾಲ ನೀತಿಗೆ ಇಲ್ಲಿ ತಾವಿಲ್ಲ! ಇಲ್ಲಿರುವುದು ಏನಿದ್ದರೂ ಏರುಧ್ವನಿಯ, ಜೋರು ಮಾತಿನ ಪ್ರಾಮಾಣಿಕತೆ ಮಾತ್ರ. ಬೇಕಿದ್ದರೆ ತೊಗೋ ಇಲ್ಲದಿದ್ದರೆ ಇಲ್ಲ ಎನ್ನುವ ನೇರವಂತಿಕೆ ಮಾತ್ರ.
Category: Articles
ಆರ್ಥಿಕ ಪ್ರಗತಿಯನ್ನು ಸಾಧಿಸಲು ಇರುವ ಎಲ್ಲ ದಾರಿಗಳನ್ನೂ ಹಿಂದಿನ ಕಾಂಗ್ರೆಸ್ ಸರ್ಕಾರಗಳು ತಮ್ಮ ಯಥಾಶಕ್ತಿ ಮುಚ್ಚಿಯೇ ಹಾಕಿವೆ! ಈಗ ಆ ಮುಚ್ಚಿ ಹೋಗಿರುವ ಮಾರ್ಗಗಳನ್ನು ತೆಗೆಯಬೇಕು. ಜೊತೆಗೆ ಹೊಸದಾದ, ನಮ್ಮ ಸಂಸ್ಕೃತಿಗೆ ಹಾನಿ ಮಾಡಲಾರದ ಮಾರ್ಗಗಳನ್ನೂ ಹುಡುಕಬೇಕು. ಸಧ್ಯದ ಪರಿಸ್ಥಿತಿ ನೋಡಿದರೆ ಹೊಲಸು ಜನರು ಮೋದಿಯವರನ್ನ ಸ್ಥೈರ್ಯವನ್ನು ಕುಗ್ಗಿಸುವ ಎಲ್ಲ ವಿಧವಾದ ಅನೈತಿಕ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಹೀಗಿರುವಾಗ ಎಲ್ಲರಿಗಿಂತ ಪ್ರಾಮಾಣಿಕರೆನಿಸುವ ಮೋದಿಯವರ ಒಳಿತಿಗಾಗಿ ಪ್ರಾರ್ಥನೆ ಮಾಡುವುದರಲ್ಲಿ ತಪ್ಪೇನು?
ಜಲಸ್ಥಂ ವಿಷ್ಣು, ಡೋಲಸ್ಥಂ ಕೃಷ್ಣಂ, ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ಎಂದು ಹಿರಿಯರು ಹೇಳಿದ್ದಾರೆ. ಕೇಶವನ ರಥೋತ್ಸವವನ್ನೂ ಕೃಷ್ಣನ ತೊಟ್ಟಿಲು ಸೇವೆಯನ್ನೂ ನಾವು ಅನೇಕ ಕಡೆ ನೋಡಿದ್ದೇವೆ. ಆದರೆ ಜಲಶಾಯಿಯಾದ ನಾರಾಯಣನನ್ನು ನೋಡಿರುವವರು ಕಡಿಮೆ. ಕೇವಲ ಭಾಗ್ಯಶಾಲಿಗಳಷ್ಟೇ ನೋಡಲು ಸಾಧ್ಯ. ಯಾಕೆಂದರೆ ಜಲನಾರಾಯಣನ ಗುಡಿಯು ಇರುವುದು ನೇಪಾಳದಲ್ಲಿ. ಅಲ್ಲಿಗೆ ಎಲ್ಲರೂ ಹೋಗಲಾಗುವುದಿಲ್ಲ ಅಲ್ಲವೇ!? ಚಿಂತೆ ಬೇಡ. “ಸುಲಭಪೂಜೆಯ ಮಾಡಿ ಬಲವಿಲ್ಲದವರು” ಎಂಬ ದಾಸರ ಮಾತನ್ನು ನೆನೆಸಿಕೊಳ್ಳೋಣ. ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಅನುಸರಿಸಿ ಭಕ್ತಿಯಿಂದ, ಆದಷ್ಟೂ ಅನುಸಂಧಾನಪೂರ್ವಕವಾಗಿ ಪೂಜಿಸೋಣ. ದೇವನು ಖಂಡಿತವಾಗಿಯೂ ಪ್ರೀತನಾಗುವನು. ಎಷ್ಟು ಸುಲಭವಾದ ಪೂಜೆ ನೋಡಿ ಇದು.
ಆದರೆ ಹುಲಿಯ ವಿಷಯ ಹಾಗಲ್ಲ! ಅದರ ಶಕ್ತಿಯು ಅಪಾರ. ಆದರೂ ಅದು ಸಂಕೋಚದ ಜೀವಿ. ದಟ್ಟ ಕಾಡಿನ ಮಧ್ಯವೇ ಅದರ ವಾಸ. ಅತ್ಯಗತ್ಯವಿಲ್ಲದೆ ಅದು ಇತರರೆಡೆ ಬಾರದು. ಸಿಂಹದಂತೆ ತನ್ನ ಗುಂಪಿನ ಇನ್ನಿತರ ಮೇಲೆ ಆಹಾರಕ್ಕಾಗಿ ಅವಲಂಬನೆಯನ್ನೂ ಅದು ಮಾಡದು. ಕೋಪ ಬಂತೆಂದು ಸಲಗನಂತೆ ಬಂಡಾಯದ ವಿಧ್ವಂಸಕಾರ್ಯವನ್ನೂ ಮಾಡದು. ಕೆಲಸ ಮುಗಿದ ನಂತರ ಮತ್ತೆ ತನ್ನ ವಾಸಸ್ಥಾನವನ್ನು ಸದ್ದಿಲ್ಲದಂತೆ ಸೇರಿಕೊಂಡು ಬಿಡುವುದು. ವಿನಾಕಾರಣ ಬೇರಯವರ ಮೇಲೆ ಎಂದೂ ಎರಗದು! ಆದರೆ ಅದರ ಎಲ್ಲೆಯನ್ನು ಪ್ರಶ್ನಿಸಿದಿರೋ! ಮುಂದಿನದನ್ನು ಓದಲು ನೀವು ಇರುವುದೇ ಇಲ್ಲ!
ಜಗತ್ತಿಗೆ ಜ್ಞಾನದ ರುಚಿಯನ್ನು ತೋರಿಸಿದ ಶ್ರೀವೇದವ್ಯಾಸದೇವರು ನೆಲೆಸಿರುವುದು ಹಿಮಾಲಯದ ಉತ್ತರ ಭಾಗದಲ್ಲಿ. ಹಿಮಪರ್ವತಗಳಿಂದ ಸುತ್ತುವರೆದ ಬೆಚ್ಚನೆಯ ತಪ್ಪಲಿನಲ್ಲಿ ಅವರ ಆಶ್ರಮವಿದೆ. ಬದರಿಕಾಶ್ರಮ ಎನ್ನುವುದು ಅವರ ಆಶ್ರಮದ ಹೆಸರು. ಈ ಬದರಿಕಾಶ್ರಮವು ಇರುವ ಪ್ರದೇಶ ಬಹು ರಮಣೀಯವಾಗಿದೆ. ಇದಕ್ಕೆ ಶಮ್ಯಾಪ್ರಾಸವೆನ್ನುವ ಮುದ್ದಾದ ಹೆಸರು ಇದೆ
ಶ್ರೀಕೃಷ್ಣದೇವರ ಪಂಚಾಮೃತಕ್ಕೆ ನರ್ಮದೆಯೇ ಹಾಲುಕೊಡುವವಳು. ದುರ್ದೈವದ ಗಳಿಗೆಯೊಂದರಲ್ಲಿ ಹುಲಿಯೊಂದು ನರ್ಮದೆಯನ್ನು ತಿಂದುಬಿಟ್ಟಿತು. ಇದನ್ನು ತಿಳಿದ ಶ್ರೀರಘುಪ್ರವೀರತೀರ್ಥರ ಹೃದಯವು ತೀವ್ರವಾಗಿ ನೊಂದಿತು. ವ್ಯಥೆಗೊಂಡ ಅವರು ಪದ್ಮಾಸನದಲ್ಲಿ ಕುಳಿತುಬಿಟ್ಟರು. ಮಧ್ಯಾಹ್ನವಾದರೂ ಪೂಜೆಗೆ ಏಳಲಿಲ್ಲ. ಮಠದ ಸಿಬ್ಬಂದಿಗಳು ಚಿಂತಿತರಾದರು. ಇತ್ತ ಮಠದ ಹೊರಗೆ ವಿಲಕ್ಷಣವಾದ ಘಟನೆಯೊಂದು ನಡೆಯಿತು.
ಮುನ್ನಡೆವಾಗ ಮನಸ್ಸಿನಲ್ಲಿ ಒಂದು ಪ್ರಶ್ನೆಯ ಚೂರು ಕಾಣಿಸಿಕೊಂಡಿತು. “ಇಲ್ಲಿರುವುದು ಶಿವಲಿಂಗ ಒಂದೇ ಒಂದು. ಈ ಪಂಚಮುಖದ ಶಿವಧ್ಯಾನಶ್ಲೋಕವು ಸರಿಹೊಂದುವುದೇ ಎಂದು.” ನಾನು ಈ ಪರ್ವತದ ಮೇಲೆ ಹೇಳಿಕೊಂಡ ಈ ಶ್ಲೋಕವು ಸ-ಮಂಜ-ಸವೇ ಆಗಿದೆ ಎಂದು ತುಂಗನಾಥನು ತೋರಿಸಿಕೊಟ್ಟ. ಆದರೆ ಈ ಜಾಗದಲ್ಲಿ ಅಲ್ಲ. ಚಂದ್ರಶಿಲಾ ಕೋಡುಗಲ್ಲಿನ ಬಳಿ.
ಆದರೆ ವೈದಿಕಾಚಾರ್ಯರ ಪ್ರತಿಮೆಯೊಂದು ಸಾರ್ವಜನಿಕರ ಲ್ಯಾಂಡ್ ಮಾರ್ಕ್ ಆದಲ್ಲಿ ಅದು ನಮಗೊಂದು ಹೆಮ್ಮೆಯ ಸಂಕೇತ ಎನಿಸಬೇಕಲ್ಲವೆ? ವಿರಳವಾದರೂ ಪರವಾಗಿಲ್ಲ ಉತ್ತಮವಾಗಿದ್ದರೆ ಸಾಕು, ಒಟ್ಟಿನಲ್ಲಿ ವೇದಾಂತಾಗಸದ ನಕ್ಷತ್ರಕ್ಕೊಂದು ವೇದಿಕೆ ಬೇಕೇ ಬೇಕು. ಎಲ್ಲರಿಗೂ ಅವರ ಮಹತ್ವ ತಿಳಿಯಬೇಕು.
“ಚೆನ್ನಾಗಿ” ಬದುಕಬೇಕೆಂಬ ಇಚ್ಛೆ ಎಷ್ಟು ಜನಕ್ಕಿರುವುದೋ ಏನೋ ಗೊತ್ತಿಲ್ಲ. ಆದರೆ ಬದುಕಲೇಬೇಕೆನ್ನುವ ಇಚ್ಛೆಯಂತೂ ಎಲ್ಲರಿಗೂ ಚೆನ್ನಾಗಿಯೇ ಇರುವುದು. ದೇವರೇನೋ ಬದುಕಬೇಕೆನ್ನುವ…