ಶುಭಕಾರ್ಯಗಳಲ್ಲಿ ರಕ್ತವರ್ಣ / ಹಳದಿ / ಕುಂಕುಮವರ್ಣದ ಮಂತ್ರಾಕ್ಷತೆಯನ್ನು ಮಾತ್ರವೇ ವಧೂವರರ ಅಥವಾ ವಟುವಿನ ಮೇಲೆ ಹಾಕಬೇಕೇ ಹೊರತು ನೀಲಿ, ಹಸಿರು, ಬಿಳಿ ಹೀಗೆ ಬಗೆ ಬಗೆಯ ವರ್ಣದ ಅಕ್ಷತೆಗಳನ್ನು ಸುರಿಯಬಾರದು. ಇತ್ತೀಚಿನ ಹುಚ್ಚು ಆಗಿರುವ ಥರ್ಮಾಕೋಲಿನ ಗುಂಡುಗಳು, ಢಬ್ ಎಂದು ಸಿಡಿಯುವ ಬಣ್ಣ ಬಣ್ಣದ ಕಾಗದಗಳನ್ನೂ ಬಳಸಲೇ ಬಾರದು.
Category: You Shoud know
ಶ್ರೀರಾಘವೇಂದ್ರತೀರ್ಥ ಮಹಾಪ್ರಭುಗಳು ಕೂಡಾ, ತಮ್ಮ ಪೂರ್ವಾಶ್ರಮದಲ್ಲಿ ಶ್ರೀರಾಮಚಂದ್ರತೀರ್ಥರಲ್ಲಿ ವಿದ್ಯಾರ್ಜನೆಯನ್ನು ಮಾಡಿದ್ದಾರೆಂದು ಹಿರಿಯರ ಮಾತಿದೆ. ಎಂತಹ ಆದರ್ಶವಾದ ನಡುವಳಿಕೆಯಲ್ಲವೇ ಇದೆಲ್ಲ. ಶ್ರೀವ್ಯಾಸರಾಜರು ತಮ್ಮ ಶಿಷ್ಯರನ್ನು ಶ್ರೀಸುರೇಂದ್ರರಿಗೆ ಕೊಟ್ಟರು, ಹಾಗೆ ಕೊಟ್ಟ ವಿಜಯೀಂದ್ರರಲ್ಲಿ ಶ್ರೀರಾಮಚಂದ್ರತೀರ್ಥರು ಪಾಠ ಹೇಳಿಸಿಕೊಂಡರು, ಶ್ರೀರಾಮಚಂದ್ರತೀರ್ಥರಲ್ಲಿ ಶ್ರೀರಾಯರು ಪಾಠ ಹೇಳಿಸಿಕೊಂಡಿದ್ದಾರೆ! ಇಂತಹ ಒಂದು ಅಪೂರ್ವವಾದ ಬಾಂಧವ್ಯ ಇಂದಿಗೂ ಮುಂದುವರೆಯಲಿ ಎಂಬುದು ನನ್ನ ಹೆಬ್ಬಯಕೆ.
ಪ್ರತೀ ಸಲವೂ ಕರ್ನಾಟಕದವರೇ ಈ ರೀತಿಯ ಅನ್ಯಾಯಕ್ಕೆ ಒಳಗಾಗಬೇಕೇ? ಸಾವಿರಾರು ಜನ ನಿತ್ಯ ಬ್ಲಾಕಿನಲ್ಲಿ ಹಣ ಕೊಟ್ಟಾದರೂ ಓಡಾಡುವ ಮಾರ್ಗವೊಂದರಲ್ಲಿ ರೈಲನ್ನು ಓಡಿಸಲು ಅದೆಷ್ಟು ಬೇಸರ ಈ ಇಲಾಖೆಗೆ? ನಮ್ಮ ಹಕ್ಕಾಗಿರುವ ಈ ವಿಷಯಕ್ಕೆ ನಾವು ಎಷ್ಟೆಂದು ಅಳಬೇಕಾಗಿದೆಯಲ್ಲ ಇವರೆಲ್ಲರ ಮುಂದೆ? ಕೊಟ್ಟ ರೈಲುಗಳಿಗೂ ನೂರೆಂಟು ಕಂಡಿಷನ್ನುಗಳು. ಈ ಕಂಡಿಷನ್ನುಗಳಿಗೆ ಒಪ್ಪಿಕೊಂಡರೂ ಏನಾದರೂ ಒಂದು ಕೊರತೆಯನ್ನು ಬೇಕೆಂದೇ ನಿರ್ಮಿಸುತ್ತಾರಲ್ಲ. ಎಂತಹ ದುರ್ದೈವ ನಮ್ಮದು?
ಇಂದು ಮಧ್ಯಾಹ್ನ ಎ.ಎನ್.ಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಒಂದು ಸುದ್ದಿಯನ್ನು ಉಲಿದಿದೆ. ಅಧಿಕೃತ ವರದಿಗಳ ಪ್ರಕಾರ ಡೆಹ್ರಾಡೂನ್, ಟೆಹ್ರಿ, ಪೌಡಿ ಮತ್ತು ನೈನಿತಾಲ್ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಸುರಿಯುವ ನಿರೀಕ್ಷೆ ಇದೆ. ಎಂದು. ಈಗ ಅಲ್ಲಿ ಮಳೆ ಬಂದರೂ ಕೂಡ, ಯಾತ್ರಿಕರಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸೋಣ. ನೈಸರ್ಗಿಕ ಆಕಸ್ಮಿಕಗಳ ಸಂದರ್ಭಗಳಲ್ಲಿ ಯಾತ್ರಿಕರು ಮೊದಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಲ್ಲಿ ಕೊಟ್ಟಿದೆ. ಯಾತ್ರೆಯ ಇಚ್ಛೆಯುಳ್ಳವರು ಇದನ್ನು ಓದಿಕೊಳ್ಳುವುದು ಉತ್ತಮ.
“ಚೆನ್ನಾಗಿ” ಬದುಕಬೇಕೆಂಬ ಇಚ್ಛೆ ಎಷ್ಟು ಜನಕ್ಕಿರುವುದೋ ಏನೋ ಗೊತ್ತಿಲ್ಲ. ಆದರೆ ಬದುಕಲೇಬೇಕೆನ್ನುವ ಇಚ್ಛೆಯಂತೂ ಎಲ್ಲರಿಗೂ ಚೆನ್ನಾಗಿಯೇ ಇರುವುದು. ದೇವರೇನೋ ಬದುಕಬೇಕೆನ್ನುವ…
ರಥಬೀದಿಯನ್ನು ಸುತ್ತುತ್ತಾ… ಉಡುಪಿಗೆ ಬಂದಾಗ ದರ್ಶನ ಬೇಗ ಮುಗಿದು ಊಟ ತಿಂಡಿ ಎಲ್ಲ ಮುಗಿದ ಮೇಲೆ, ಹಾಗೆಯೇ ಒಂದು ಸುತ್ತು…
ಕೆಲವೊಮ್ಮೆ ಮೊಬೈಲ್ ಫೋನಿನಿಂದ ಗೂಗಲ್ ಪ್ರಾಡಕ್ಟ್ ಒಂದಕ್ಕೆ ಲಾಗಿನ್ ಆಗುವ ಪ್ರಸಂಗ ಬರುತ್ತದೆ. ಉದಾ: ಗೂಗಲ್ ಹ್ಯಾಂಗೌಟ್ಸ್!. ಯಾವುದೋ ಒಂದು ಉದ್ದೇಶಕ್ಕೆ ಗೂಗಲ್ಲಿನ ಈಮೈಲ್ ಅಪ್ಲಿಕೇಶನ್ ಅನ್ನು ಬಳಸಿದಾಗ ಅದು ಗೂಗಲ್ಲಿನ ಸಂಬಂಧಪಟ್ಟ ಇನ್ನಿತರ ಅಪ್ಲಿಕೇಶನ್ನುಗಳಲೆಲ್ಲ ಲಾಗಿನ್ ಆಗಿಬಿಟ್ಟಿರುತ್ತದೆ.
ಪೂಜ್ಯ ಗುರುಗಳಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ೬೦ನೆ ವರ್ಷದ ಜನ್ಮನಕ್ಷತ್ರದ ಅಂಗವಾಗಿ ಹೊರತಂದ “ರೌಪ್ಯದೀಪ” ಎನ್ನುವ ಸ್ಮರಣಸಂಚಿಕೆಗೆ ಬರೆದ ಲೇಖನ…