ಅವರ ಮಾತು ಶಾಪ ಮತ್ತು ಅನುಗ್ರಹ ಎರಡೂ ರೀತಿಯಲ್ಲಿ ವರ್ತಿಸಬಲ್ಲದು ಎಂಬ ಅರಿವಿದ್ದ ಅಧಿಕಾರಿಗಳು ಮುಚ್ಚಿದ್ದ ಬಾವಿಯನ್ನು ಎರಡೇ ದಿನಗಳಲ್ಲಿ ತೆಗೆಸಿದರು. ಸುಮಾರು 25 ಅಡಿಗಳಷ್ಟು ಶುದ್ಧವಾದ ನೀರು ಆ ಬಾವಿಯಲ್ಲಿ ಕೆಲವೇ ಗಂಟೆಗಳಲ್ಲಿ ತುಂಬಿಕೊಂಡಿತು.
eeshavasyam Posts
ಇವರು ಹೀಗೆ ಎಚ್ಚರದಪ್ಪಿ ಬಿದ್ದಿದ್ದಾಗ ಹತ್ತಿರವಿದ್ದ ಗೋರಿಗಳಿಂದ ಕೆಲವು ದೆವ್ವಗಳು ಎದ್ದು ಬಂದು ಇವರ ರಕ್ತವನ್ನು ಹೀರಲು ಪ್ರಯತ್ನಿಸಿವೆ. ಆದರೆ ಅವರ ದಾಳಿಗೆ ಸಿಕ್ಕಿದ್ದು ಕೇವಲ ಜಾಹ್ನವಿ ಮಾತ್ರವೇ. ಚೂರೇ ಚೂರು ತೆರೆದಿದ್ದ ಕಿಟಕಿಯ ಮೂಲಕ ಅವಳ ಕೈಯನ್ನೆಳೆದು ಆ ದೆವ್ವಗಳು ಕಚ್ಚಿ ಕಚ್ಚಿ ಎಳೆದಾಡಿವೆ. ಧೈರ್ಯವನ್ನು ಒಟ್ಟುಗೂಡಿಸಿಕೊಂಡ ಆಕೆ ತನ್ನ ಧೈರ್ಯವನ್ನು ಒಟ್ಟುಗೂಡಿಸಿಕೊಂಡು ಹೋರಾಟನಡೆಸಿ, ಅವುಗಳ ಕೈಗಳನ್ನು ಕಿಟಕಿಯಿಂದಾಚೆಗೆ ನೂಕಿ, ಗಾಜನ್ನು ಏರಿಸಿಕೊಂಡಳು. ಆದರೆ ಅಷ್ಟು ಹೊತ್ತಿಗೆ ಆಗಬೇಕಾಗಿದ್ದ ಅನಾಹುತವು ಆಗಿಯೇ ಹೋಗಿತ್ತು.
ಮಡಿವಂತಿಕೆಯ ಹುಚ್ಚನ್ನು ಹಿಡಿಸಿಕೊಂಡ ಜನರು ಮಾಡುವ ತಪ್ಪು ಆಚರಣೆಗಳನ್ನು ನೋಡಿ ಶಾಸ್ತ್ರವೇ ಔಟ್ ಡೇಟೆಡ್ ಎನ್ನುವ ವಿಪರೀತದ ನಿರ್ಧಾರಕ್ಕೆ ಬರುವುದು ತಪ್ಪು. ಮನುಷ್ಯತ್ವವನ್ನು ಬಿಟ್ಟು ವ್ಯವಹರಿಸು ಎಂದು ಶಾಸ್ತ್ರಗಳು ಎಂದೂ ಹೇಳಿಲ್ಲ. ಹಾಗೆ ಹೇಳಿದ್ದೇ ಆದರೆ ರಾಯರು ಸರಸ್ವತೀದೇವಿಗೆ ಪಿಶಾಚಜನ್ಮದಿಂದ ಮುಕ್ತಿಗೊಳಿಸುವುದಾಗಲಿ, ಶ್ರೀವಾದಿರಾಜರು ವಿಧವಾ ಸ್ತ್ರೀಯಳ ಬಗ್ಗೆ ಅನುಕಂಪದ ಮಾತನ್ನಾಗಲಿ, ವಿಜಯದಾಸರು ಸಾಯುತ್ತಿದ್ದ ಕತ್ತೆಗೆ ನೀರು ಕುಡಿಸುವುದಾಗಲಿ ಮಾಡುತ್ತಿದ್ದಿಲ್ಲ. ಅಲ್ಲವೇ.
ಕರಣಿಕರ ಎದೆ ಝಲ್ಲೆಂದಿತು. ಸ್ವಾಮೀ !! ನಿನ್ನ ಇಚ್ಛೆ ಇಲ್ಲಿಯೇ ಇರಬೇಕೆಂದು ಇದೆಯೇ? ಎಂದು ಪ್ರಾರ್ಥಿಸಿ ನನ್ನ ಅನುಚರರ ಅರೋಗ್ಯ ಸರಿಮಾಡು ಪುನಃ ಸ್ವಸ್ಥಾನಕ್ಕೆ ಸೇರಿಸಿ ಬರುವೆ ಎಂದು ಬೇಡಿಕೊಂಡ !! ಅನುಚರರ ಕಣ್ಣು ಕಾಣತೊಡಗಿದವು. ಆದರೆ ಮಾರುತಿಯರಾಯ ಒಂದು ಇಂಚೂ ಅಲುಗುತ್ತಿಲ್ಲ. !!! ಪುನಃ ಬೇಡಿಕೊಂಡ ಕರಣಿಕ.. ಸ್ವಾಮಿಯ ವಿಗ್ರಹದಿಂದ ಭವ್ಯ ಬೆಳಕು ಗೋಚರವಾಯಿತು
ಮಾರನೆಯ ದಿನ ಬೆಳಿಗ್ಗೆ ಬಾಳೆಯ ನಾರಿನಲ್ಲಿ ಸುತ್ತಿದ ನಾಲ್ಕಾರು ಹೋಳಿಗೆಗಳು ಶಿಬರೂರಿನ ತಂತ್ರಿಗಳ ಅಡುಗೆ ಕೋಣೆಯನ್ನು ತಲುಪಿದವು. ಕೊಟ್ಟಾರಿಗಳಿಗೂ ಏನೋ ಸಂತೋಷ, ಈ ಕೆಲಸ ಮಾಡಲು. ಆ ದಿನ ಮಧ್ಯಾಹ್ನ ವೈಶ್ವಾನರನ ಆರಾಧನೆ ಮುಗಿದ ನಂತರ ಕುಲಪತಿಗಳಿಗೆ ಈ ವಿಷಯ ತಿಳಿದು ಹೃದಯ ಅರಳಿತು.
ಜವಾಬ್ದಾರಿಯನ್ನು ಹೇಗೆ ನಿರ್ವಹಿಬೇಕು ಎಂಬುದಕ್ಕೆ ಗುರುಗಳೇ ಪ್ರತ್ಯಕ್ಷ ಮಾದರಿ. ಇದೇ ಅಲ್ಲವೇ ಪ್ರೇಮವೆಂದರೆ? ಇದೇ ಅಲ್ಲವೇ ಸಾಮರ್ಥ್ಯವೆಂದರೆ? ಇದುವೆ ಅಲ್ಲವೇ ಶ್ರೀ-ಪ್ರಾಣ-ನಾಥನ ಒಲುಮೆಗೆ ಪಾತ್ರರಾಗುವುದು ಎಂದರೆ?
ಅಬ್ಬಾ! ಎಂತಹ ಮಹಾವ್ಯಕ್ತಿತ್ವ ಶ್ರೀಭುವನೇಂದ್ರ ತೀರ್ಥರದ್ದು? ಬರೆದ ಒಂದಕ್ಷರವನ್ನು ಕೂಡ ಅಳಿಸಿ ಹಾಕಲು ನಮ್ಮ ಮನಸ್ಸೊಪ್ಪದು. ಅಂತಹುದರಲ್ಲಿ ಸಕಲ ಅಕ್ಷರಾಭಿಮಾನಿ ದೇವತೆಗಳೆಲ್ಲ ನಾಮುಂದು ತಾಮುಂದು ಎಂದು ಬಂದು ನೆಲೆಸಿದ ಮಹಾನ್ ಭಾಷ್ಯವೊಂದನ್ನು ನೀರಲ್ಲಿ ವಿಸರ್ಜನೆ ಮಾಡಲು ಅದೆಷ್ಟು ಧೈರ್ಯ ಇದ್ದಿರಬೇಕು? ಆಚಾರ್ಯ ಮಧ್ವರ ಮಾತು ಎಂದರೆ ಅದೆಂತಹ ನಿಷ್ಠೆ ಅವರಿಗೆ? ಅದೆಷ್ಟು ಪ್ರೇಮ ಅವರ ಮೇಲೆ?
ಪ್ರತೀ ಸಲವೂ ಕರ್ನಾಟಕದವರೇ ಈ ರೀತಿಯ ಅನ್ಯಾಯಕ್ಕೆ ಒಳಗಾಗಬೇಕೇ? ಸಾವಿರಾರು ಜನ ನಿತ್ಯ ಬ್ಲಾಕಿನಲ್ಲಿ ಹಣ ಕೊಟ್ಟಾದರೂ ಓಡಾಡುವ ಮಾರ್ಗವೊಂದರಲ್ಲಿ ರೈಲನ್ನು ಓಡಿಸಲು ಅದೆಷ್ಟು ಬೇಸರ ಈ ಇಲಾಖೆಗೆ? ನಮ್ಮ ಹಕ್ಕಾಗಿರುವ ಈ ವಿಷಯಕ್ಕೆ ನಾವು ಎಷ್ಟೆಂದು ಅಳಬೇಕಾಗಿದೆಯಲ್ಲ ಇವರೆಲ್ಲರ ಮುಂದೆ? ಕೊಟ್ಟ ರೈಲುಗಳಿಗೂ ನೂರೆಂಟು ಕಂಡಿಷನ್ನುಗಳು. ಈ ಕಂಡಿಷನ್ನುಗಳಿಗೆ ಒಪ್ಪಿಕೊಂಡರೂ ಏನಾದರೂ ಒಂದು ಕೊರತೆಯನ್ನು ಬೇಕೆಂದೇ ನಿರ್ಮಿಸುತ್ತಾರಲ್ಲ. ಎಂತಹ ದುರ್ದೈವ ನಮ್ಮದು?