ಅಷ್ಟೊಂದು ಸುಂದರವಾದ ಅನುಭವ ಅದು. ಕಣ್ಣಿಗೆ ಏನೇನೂ ಕಾಣದು. ಆದರೆ ಮಳೆಯ ಸದ್ದು ಮಾತ್ರ ನಿಮ್ಮ ಹೃದಯದೊಂದಿಗೆ ಮಾತಿಗಿಳಿದಿರುತ್ತದೆ. ಒಮ್ಮೆಯಾದರೂ ಅನುಭವಿಸಿ ಅದನ್ನು.
eeshavasyam Posts
ಕಣ್ಣಿಲಿ ಕೃಷ್ಣಾಕೃತಿ ನೋಡದೆ ಪರ ಹೆಣ್ಣಿನ ನೋಡುವ ತಪ್ಪು
ನಿನ್ನ ಕಥಾಮೃತ ಕೇಳದೆ ಹರಟೆಯ ಮನ್ನಿಸುವ ಕಿವಿ ತಪ್ಪು
ಅನ್ನವ ನಿನಗರ್ಪಿಸದಜ್ಞಾನದಿ ಉಣ್ಣುವ ನಾಲಿಗೆ ತಪ್ಪು
ಚಿನ್ಮಯ ಚರಣಕ್ಕೆರಗದೆ ಇಹ ಉನ್ಮತ್ತರ ನಮಿಸುವ ಶಿರ ತಪ್ಪು
ತಿರುಮಲೆಯಲ್ಲಿ ಶ್ರೀಶ್ರೀನಿವಾಸನಿಗೆ ಬಕುಲಾದೇವಿಯು ತಾಯಿಯಾಗಿದ್ದು ಅವನ ಸೇವೆ ಮಾಡಿದ್ದು ಎಲ್ಲರಿಗೂ ಗೊತ್ತು. ಸ್ವಾಮಿಗೆ ಪ್ರತಿದಿನವೂ ಅವಳು ವಿವಿಧ ರೀತಿಯ ಖಾದ್ಯಗಳನ್ನು…
ಇದ್ದಕ್ಕಿದ್ದ ಹಾಗೆ ಹರಿಯ ಕರೆಯು ಬಂದಿದ್ದು ನಿಜಕ್ಕೂ ಆಶ್ಚರ್ಯ. ಹತ್ತು ವರ್ಷಗಳಿಂದ ಇದ್ದ ಬಯಕೆಯು ಅನಿರೀಕ್ಷಿತವಾಗಿ ಮೊನ್ನೆ ಮೊನ್ನೆ ಪೂರೈಸಿತು.…
“ಬಾ ತೋರಿಸು ನಿನ್ನ ಯೋಗ್ಯತೆಯನ್ನು, ನೋಡಿಯೇ ಬಿಡುತ್ತೇನೆ” ಎನ್ನುತ್ತಾ ಏಕಕಾಲದಲ್ಲಿಯೇ ಪೂಜಾಪ್ರಿಯರನ್ನೂ, ಆಧ್ಯಾತ್ಮಜೀವಿಗಳನ್ನೂ, ಬೆಟ್ಟವೇರುವ ಸಾಹಸಿಗಳನ್ನೂ ಕೆಣಕಿ ತನ್ನೆಡೆ ಸೆಳೆಯುವ ಸಾಮರ್ಥ್ಯ ಇರುವ ಪ್ರಾಕೃತಿಕ ನೆಲೆ ಎಂದರೆ ಹಿಮಾಲಯ.
ಮದುವೆಗಳನ್ನು ಸ್ಥೂಲವಾಗಿ ಪ್ರೇಮವಿವಾಹ ಮತ್ತು ಹಿರಿಯರು ನಿರ್ಧರಿಸಿದ ವಿವಾಹ ಎಂದು ವಿಭಾಗಿಸೋಣ. ಇವುಗಳಲ್ಲಿ ಎರಡನೆಯದ್ದೇ ಹೆಚ್ಚು ಪ್ರಚಲಿತ. ಮೊದಲನೆಯದ್ದಕ್ಕೆ ಅಡಚಣೆಗಳೇ…
ಕೆಲವೊಮ್ಮೆ ಮೊಬೈಲ್ ಫೋನಿನಿಂದ ಗೂಗಲ್ ಪ್ರಾಡಕ್ಟ್ ಒಂದಕ್ಕೆ ಲಾಗಿನ್ ಆಗುವ ಪ್ರಸಂಗ ಬರುತ್ತದೆ. ಉದಾ: ಗೂಗಲ್ ಹ್ಯಾಂಗೌಟ್ಸ್!. ಯಾವುದೋ ಒಂದು ಉದ್ದೇಶಕ್ಕೆ ಗೂಗಲ್ಲಿನ ಈಮೈಲ್ ಅಪ್ಲಿಕೇಶನ್ ಅನ್ನು ಬಳಸಿದಾಗ ಅದು ಗೂಗಲ್ಲಿನ ಸಂಬಂಧಪಟ್ಟ ಇನ್ನಿತರ ಅಪ್ಲಿಕೇಶನ್ನುಗಳಲೆಲ್ಲ ಲಾಗಿನ್ ಆಗಿಬಿಟ್ಟಿರುತ್ತದೆ.
“ಸಾಕಾಗೇದವ ಈಗಿನ ಹುಡುಗೂರs ಕಾಲಾಗs. ನಾವರs ಎಷ್ಟು ಸಲ ಹೇಳೋಣು? ಬ್ಯಾಡ್ರ್ಯಪಾ ಇಷ್ಟೊಂದು ಮೊಬೈಲುದ್ದು ಹುಚ್ಚು, ಒಂಚೂರು ಆರಾಮs ಇರ್ರಿ ಅಂದ್ರs ಕೇಳವಲ್ವು. ಇಕಾ, ಇಲ್ನೋಡು, ಅಳಬ್ಯಾಡ, ರಮೇಶನ ನಂಬರ ಕೊಡು” ಎಂದರು ದೇಶಪಾಂಡೆ ಅವರು. “ಅದು ಸ್ವಿಚ್ ಆನ್ ಇತ್ತು ಅಂದ್ರ ನಾನ್ಯಾಕ ಅತಗೋತ ಕೂಡ್ತಿದ್ದೆ” ಎಂದು ಮಗಳು ಮತ್ತೆ ಸುರ್ ಸುರ್ ಮಾಡಿದಳು.